ADVERTISEMENT

Gujarat Polls: ಪತ್ನಿ ಪರ ಪ್ರಚಾರ ಮಾಡಿ ಟೀಕೆಗೆ ಗುರಿಯಾದ ರವೀಂದ್ರ ಜಡೇಜ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2022, 9:20 IST
Last Updated 27 ನವೆಂಬರ್ 2022, 9:20 IST
ಅಮಿತ್ ಶಾ ಹಾಗೂ ರವೀಂದ್ರ ಜಡೇಜ
ಅಮಿತ್ ಶಾ ಹಾಗೂ ರವೀಂದ್ರ ಜಡೇಜ   

ಅಹಮದಾಬಾದ್: ಪತ್ನಿ ಪರ ಪ್ರಚಾರಕ್ಕಿಳಿದಿರುವ ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರ ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವುದು ಒಪ್ಪಂದದ ಉಲ್ಲಂಘನೆಯಲ್ಲವೇ? ಹಿತಾಸಕ್ತಿಯ ಸಂರ್ಘರ್ಷವಲ್ಲವೇ ಎಂದು ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಪ್ರಶ್ನಿಸಿದ್ದಾರೆ.

ಗಾಯದಿಂದಾಗಿ ಟೀಮ್ ಇಂಡಿಯಾದಿಂದ ದೂರವುಳಿದಿರುವ ಜಡೇಜ, ಪತ್ನಿ ಪರ ಪ್ರಚಾರ ನಡೆಸುತ್ತಿರುವ ಬಗ್ಗೆಯೂ ಆಕ್ರೋಶ ಕೇಳಿ ಬಂದಿದೆ. ಚುನಾವಣಾ ಪ್ರಚಾರ ನಡೆಸಲು ಜಡೇಜ ಫಿಟ್ ಆಗಿದ್ದು, ಟೀಮ್ ಇಂಡಿಯಾ ಪರ ಆಡಲು ಅನ್‌ಫಿಟ್ ಎಂದು ಆರೋಪಿಸಲಾಗಿದೆ.

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಡೇಜ ಅವರ ಪತ್ನಿ ರಿವಾಬಾ ಬಿಜೆಪಿ ಅಭ್ಯರ್ಥಿಯಾಗಿ ಜಾಮ್‌ನಗರದಿಂದ ಸ್ಪರ್ಧಿಸುತ್ತಿದ್ದಾರೆ.

ಜಡೇಜ ಅವರ ಪತ್ನಿ ಟ್ವೀಟ್ ಮಾಡಿರುವ ಪೋಸ್ಟರ್‌ನಲ್ಲಿ ಟೀಮ್ ಇಂಡಿಯಾ ಜೆರ್ಸಿ ಧರಿಸಿರುವ ಜಡೇಜ ಚಿತ್ರವನ್ನು ಲಗತ್ತಿಸಲಾಗಿದೆ. ಬಳಿಕ ಟ್ವೀಟ್ ಅಳಿಸಿ ಹಾಕಲಾಗಿದೆ.

ಗುಜರಾತ್ ವಿಧಾನಸಭೆ ಚುನಾವಣೆ ಡಿಸೆಂಬರ್ 1 ಹಾಗೂ 5ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿ. 8ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.