ADVERTISEMENT

Air Force Day 2023: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2023, 4:38 IST
Last Updated 8 ಅಕ್ಟೋಬರ್ 2023, 4:38 IST
<div class="paragraphs"><p>ವಾಯುಪಡೆ ದಿನಾಚರಣೆ</p></div>

ವಾಯುಪಡೆ ದಿನಾಚರಣೆ

   

(ಚಿತ್ರ ಕೃಪೆ: X/@rajnathsingh)

ನವದೆಹಲಿ: ಭಾರತೀಯ ವಾಯುಪಡೆ ದಿನಾಚರಣೆ (ಅಕ್ಟೋಬರ್ 08) ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯ ಸಲ್ಲಿಸಿದ್ದಾರೆ.

ADVERTISEMENT

ವಾಯುಪಡೆ ದಿನಾಚರಣೆಯಂದು ನಮ್ಮೆಲ್ಲ ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಸದಾ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿರುವ ಬಲಿಷ್ಠ, ಧೈರ್ಯ ಮತ್ತು ಕ್ರಿಯಾಶೀಲ ವಾಯುಪಡೆ ಹೊಂದಿರುವುದಕ್ಕೆ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುತ್ತದೆ. ಆಕಾಶದ ರಕ್ಷಣೆ ಮಾತ್ರವಲ್ಲದೆ ಮಾನವೀಯ ನೆಲೆಯಲ್ಲಿ ನೆರವಾಗಲು ವಾಯುಪಡೆ ಸದಾ ಮುಂಚೂಣಿಯಲ್ಲಿದೆ. ನಮ್ಮೆಲ್ಲ ಯೋಧರಿಗೆ ವಂದನೆಗಳು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ವಾಯುಪಡೆಯ ದಿನಾಚರಣೆಯಂದು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ. ವಾಯುಪಡೆಯ ಶೌರ್ಯ, ಬದ್ಧತೆ ಮತ್ತು ಸಮರ್ಪಣೆಯ ಬಗ್ಗೆ ಇಡೀ ದೇಶ ಹೆಮ್ಮೆಪಟ್ಟುಕೊಳ್ಳುತ್ತದೆ. ಅವರ ತ್ಯಾಗ ಹಾಗೂ ಸೇವೆಯಿಂದ ನಮ್ಮ ಆಕಾಶವು ಸುರಕ್ಷಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸಂದೇಶದಲ್ಲಿ ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ದೇಶದ ಹಿತಾಸಕ್ತಿಯನ್ನು ಕಾಯಲು ಲೋಹದ ಹಕ್ಕಿ ಮತ್ತು ಯೋಧರ ಕೊಡುಗೆಯನ್ನು ಸ್ಮರಿಸಿದ್ದಾರೆ. ದೇಶದ ಸೌರ್ವಭೌಮತ್ವ ರಕ್ಷಿಸಲು ವಾಯುಪಡೆಯ ಅಮೂಲ್ಯ ಸೇವೆ ಮತ್ತು ತ್ಯಾಗವನ್ನು ಸ್ಮರಿಸುವುದಾಗಿ ಹೇಳಿದ್ದಾರೆ.

ಭಾರತವನ್ನು ಸುರಕ್ಷಿತವಾಗಿರಿಸಲು ವಾಯುಪಡೆಯ ಕೊಡುಗೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ಮರಿಸಿದ್ದಾರೆ. ಭಾರತದ ವಾಯುಪಡೆಯು ಜಗತ್ತಿನ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.