ADVERTISEMENT

ಖರೋಲಾ ವಿಮಾನಯಾನ ಕಾರ್ಯದರ್ಶಿ

ಪಿಟಿಐ
Published 6 ಫೆಬ್ರುವರಿ 2019, 19:25 IST
Last Updated 6 ಫೆಬ್ರುವರಿ 2019, 19:25 IST
ಖರೋಲಾ
ಖರೋಲಾ   

ನವದೆಹಲಿ: ಏರ್‌ ಇಂಡಿಯಾದ ಮುಖ್ಯಸ್ಥ ಪ್ರದೀಪ್‌ ಸಿಂಗ್ ಖರೋಲಾ ಅವರನ್ನು ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಜನವರಿ 31ರಂದು ರಾಜೀವ್‌ ನಯನ್‌ ಚೌಬೆ ಅವರ ನಿವೃತ್ತಿಯಿಂದತೆರವಾಗಿದ್ದ ಸ್ಥಾನಕ್ಕೆ ಈ ನೇಮಕ ನಡೆದಿದೆ.

ಕರ್ನಾಟಕ ಕೇಡರ್‌ನ 1985ರ ಐಎಎಸ್‌ ಅಧಿಕಾರಿಯಾಗಿರುವ ಖರೋಲಾ ಅವರನ್ನು 2017ರ ನವೆಂಬರ್‌ನಲ್ಲಿ ಏರ್‌ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಚೌಬೆ ಅವರನ್ನು ಯುಪಿಎಸ್‌ಸಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.