ADVERTISEMENT

ಬಹುಕೋಟಿ ಮೌಲ್ಯದ 500 ವಿಮಾನ ಖರೀದಿಗೆ ಮುಂದಾದ ಏರ್‌ ಇಂಡಿಯಾ?

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 13:44 IST
Last Updated 11 ಡಿಸೆಂಬರ್ 2022, 13:44 IST
   

ನವದೆಹಲಿ: ವಿಮಾನಯಾನ ಸಂಸ್ಥೆ ‘ಏರ್‌ ಇಂಡಿಯಾ’ ಮಹತ್ವದ ಖರೀದಿ ಒಪ್ಪಂದವೊಂದಕ್ಕೆ ಮುಂದಾಗಿದೆ.

ವಿಮಾನ ತಯಾರಕ ಸಂಸ್ಥೆಗಳಾದ ‘ಏರ್‌ಬಸ್’ ಮತ್ತು ‘ಬೋಯಿಂಗ್’ಗಳಿಂದ ಹತ್ತಾರು ಶತಕೋಟಿ ಡಾಲರ್‌ಗಳ ಮೊತ್ತದ 500 ಜೆಟ್‌ಲೈನರ್‌ಗಳ ಖರೀದಿಗೆ ‘ಏರ್ ಇಂಡಿಯಾ’ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಉದ್ಯಮದ ಮೂಲಗಳು ಭಾನುವಾರ ತಿಳಿಸಿವೆ.

ಕೆಲ ತಿಂಗಳ ಹಿಂದಷ್ಟೇ ಏರ್‌ ಇಂಡಿಯಾವನ್ನು ಖರೀದಿಸಿದ್ದ ಟಾಟಾ ಸಮೂಹವು, ವಿಮಾನಯಾನ ಸಂಸ್ಥೆಯ ಪುನಶ್ಚೇತನಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಖರೀದಿಯ ಈ ನಿರ್ಧಾರವೂ ಒಂದಾಗಿದೆ.

ADVERTISEMENT

400 ಸಣ್ಣ ವಿಮಾನಗಳು, 100ಕ್ಕಿಂತಲೂ ಹೆಚ್ಚು ಏರ್‌ಬಸ್ ಎ–350, ಬೋಯಿಂಗ್–787 ಮತ್ತು 777ನ ಬೃಹತ್‌ ವಿಮಾನಗಳನ್ನು ಏರ್‌ ಇಂಡಿಯಾ ಖರೀದಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಮುಂದಿನ ಕೆಲವೇ ದಿನಗಳಲ್ಲಿ ಈ ಬೃಹತ್ ಒಪ್ಪಂದಕ್ಕೆ ಸಂಬಂಧಿಸಿದ ಅಂತಿಮ ನಿರ್ಧಾರ ಶೀಘ್ರವೇ ಹೊರಬೀಳಿದೆ.

ಏರ‌ಬಸ್ ಮತ್ತು ಬೋಯಿಂಗ್ ಸಂಸ್ಥೆಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.