ನವದೆಹಲಿ: ಏರ್ ಇಂಡಿಯಾ ವಿಮಾನ ಪತನದ ಬೆನ್ನಲ್ಲೇ, ಅಗತ್ಯವಿರುವ ಎಲ್ಲ ಕ್ರಮ ಹಾಗೂ ಮೇಲ್ವಿಚಾರಣೆ ನಡೆಸಲು ವಿಮಾನಯಾನ ಸಚಿವಾಲಯವು ನಿಯಂತ್ರಣ ಕೊಠಡಿ ಆರಂಭಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ದೆಹಲಿ ನಿಯಂತ್ರಣ ಕೊಠಡಿ – 011-24610843, 9650391859 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಅಹಮದಾಬಾದ್‌ನಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, 9978405304/079-23251900 ಸಂಪರ್ಕಿಸಬಹುದು. ವಿಮಾನ ನಿಲ್ದಾಣದಲ್ಲಿಯೇ ಪ್ರತ್ಯೇಕವಾಗಿ ಸಹಾಯವಾಣಿ ಆರಂಭಿಸಿದ್ದು, 9974111327ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಇದಲ್ಲದೇ, ಏರ್ ಇಂಡಿಯಾ ಪ್ರತ್ಯೇಕವಾದ ಹಾಟ್‌ಲೈನ್ ಆರಂಭಿಸಿದ್ದು, ಟೋಲ್ ಫ್ರೀ ಸಂಖ್ಯೆ 1800 5691 444 ಸಂಪರ್ಕಿಸಬಹುದು.
‘ವಿಮಾನ ಪತನದ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯವು ನಿಯಂತ್ರಣ ಕೊಠಡಿ ಆರಂಭಿಸಿದ್ದು, ಸಂಕಷ್ಟಕ್ಕೆ ಒಳಗಾದವರಿಗೆ ತಕ್ಷಣವೇ ಅಗತ್ಯ ನೆರವು ನೀಡಲು ಬದ್ಧರಾಗಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.