ADVERTISEMENT

ಮುಂಬೈನಲ್ಲಿ ಏರ್‌ ಇಂಡಿಯಾ ಗಗನಸಖಿ ಭೀಕರ ಕೊಲೆ

ಛತ್ತೀಸ್‌ಗಢ ಮೂಲದ ಗಗನಸಖಿ ಒಬ್ಬರನ್ನು ಮುಂಬೈನಲ್ಲಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಐಎಎನ್ಎಸ್
Published 5 ಸೆಪ್ಟೆಂಬರ್ 2023, 5:32 IST
Last Updated 5 ಸೆಪ್ಟೆಂಬರ್ 2023, 5:32 IST
<div class="paragraphs"><p>ರೂಪಾಲ್ ಓಗ್ರೆ</p></div>

ರೂಪಾಲ್ ಓಗ್ರೆ

   

ಫೋಟೊ: ರೂಪಾಲ್ ಓಗ್ರೆ ಇನ್‌ಸ್ಟಾಗ್ರಾಂ

ಮುಂಬೈ: ಛತ್ತೀಸ್‌ಗಢ ಮೂಲದ ಗಗನಸಖಿ ಒಬ್ಬರನ್ನು ಮುಂಬೈನಲ್ಲಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ADVERTISEMENT

24 ವರ್ಷದ ರೂಪಾಲ್ ಓಗ್ರೆ ಅವರೇ ಕೊಲೆಯಾದ ದುರ್ದೈವಿ.

ಮುಂಬೈನ ಅಂದೇರಿಯ ಟಾಟಾ ಶಕ್ತಿ ಕೇಂದ್ರದ ಮರೋಳ್‌ನ ಎನ್‌ಜಿ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ರಾತ್ರಿ ರೂಪಾಲ್ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್ ಶೋಧಿಸಿದ ಸಂದರ್ಭದಲ್ಲಿ ಪತ್ತೆಯಾದ ರೂಪಾಲ್‌ ಅವರ ಕತ್ತು ಸೀಳಲಾಗಿತ್ತು. ಆದರೆ ಅವರು ಉಸಿರಾಡುತ್ತಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪದ ಮೇಲೆ ರೂಪಾಲ್ ಉಳಿದುಕೊಂಡಿದ್ದ ಅಪಾರ್ಟ್‌ಮೆಂಟ್‌ನ ಸ್ವಚ್ಚತಾ ಕೆಲಸಗಾರ 40 ವರ್ಷದ ವಿಕ್ರಮ್ ಅತ್ವಾಲ್ ಎಂಬುವವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ರೂಪಾಲ್ ಕಳೆದ ಆರು ತಿಂಗಳುಗಳ ಹಿಂದೆಯಷ್ಟೇ ಮುಂಬೈಗೆ ಬಂದು ತನ್ನ ಸಹೋದರಿ ಜೊತೆ ಮರೋಳ್‌ನ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದರು. ಏರ್‌ ಇಂಡಿಯಾ ಗಗನಸಖಿಯಾಗಿ ಇತ್ತೀಚಿಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇವರು ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.