ADVERTISEMENT

ವಿಮಾನಯಾನ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಬೇಕು: ರಾಜ್ಯಸಭಾ ಸದಸ್ಯ ಈರಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:25 IST
Last Updated 6 ಫೆಬ್ರುವರಿ 2026, 16:25 IST
ಈರಣ್ಣ ಕಡಾಡಿ 
ಈರಣ್ಣ ಕಡಾಡಿ    

ನವದೆಹಲಿ: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಇದ್ದರೂ ವಿಮಾನಗಳ ಸಂಖ್ಯೆ ಮಾಡಿರುವ ವಿಮಾನಯಾನ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು. 

ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಶುಕ್ರವಾರ ವಿಷಯ ಪ್ರಸ್ತಾಪಿಸಿದ ಅವರು, ‘ಬೆಳಗಾವಿಯು ಕರ್ನಾಟಕದ ಎರಡನೇ ರಾಜಧಾನಿ. ₹263 ಕೋಟಿ ವ್ಯಯ ಮಾಡಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ವಿಸ್ತರಣೆಗೆ ₹26 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಹಿಂದೆ ಐದು ವಿಮಾನಯಾನ ಸಂಸ್ಥೆಗಳ ಮೂಲಕ 13 ನಗರಗಳಿಗೆ ವಿಮಾನ ಸೇವೆ ಇತ್ತು. ಈಗ ಎರಡು ಸಂಸ್ಥೆಗಳು ಐದು ನಗರಗಳಿಗಷ್ಟೇ ಸೇವೆ ನೀಡುತ್ತಿವೆ‘ ಎಂದರು. 

ಬೆಳಗಾವಿಯಿಂದ 2024-25 ರಲ್ಲಿ ₹3.40 ಲಕ್ಷ ಜನರು ಪ್ರಯಾಣಿಸಿದ್ದರು. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಸೇವೆ ಸ್ಥಗಿತಗೊಳಿಸಲಾಗಿದೆ. ಉಡಾನ್ ಯೋಜನೆಯಡಿ ಸರ್ಕಾರ ಸಬ್ಸಿಡಿ ನೀಡುವ ವರೆಗೂ ಸಂಸ್ಥೆಗಳು ಸೇವೆಗಳು ಸಲ್ಲಿಸುತ್ತವೆ. ಬಳಿಕ ಏಕಾಏಕಿ ಸೇವೆ ನಿಲ್ಲಿಸುತ್ತವೆ ಎಂದು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.