ADVERTISEMENT

ಪಾಕ್ ಭೂಪಟದಲ್ಲಿ ಜಮ್ಮು ಕಾಶ್ಮೀರ, ಲಡಾಖ್: ಎಸ್‌ಸಿಒ ಸಭೆಯಿಂದ ಹೊರನಡೆದ ಡೊಭಾಲ್

ಅನಿರ್ಬನ್ ಭೌಮಿಕ್
Published 15 ಸೆಪ್ಟೆಂಬರ್ 2020, 16:57 IST
Last Updated 15 ಸೆಪ್ಟೆಂಬರ್ 2020, 16:57 IST
ಅಜಿತ್ ಡೊಭಾಲ್
ಅಜಿತ್ ಡೊಭಾಲ್   

ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವರ್ಚುವಲ್ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಕುಳಿತುಕೊಂಡ ಜಾಗದ ಹಿಂಭಾಗದಲ್ಲಿ ಭಾರತದ ಗಡಿಪ್ರದೇಶಗಳನ್ನು ಒಳಗೊಂಡಿರುವ ಪಾಕ್ ಭೂಪಟ ಪ್ರದರ್ಶಿಸಿದ್ದನ್ನು ಖಂಡಿಸಿ ಭಾರತ ಸಭೆಯಿಂದ ಹೊರ ನಡೆದಿದೆ.

ಭಾರತದ ರಾಷ್ಟ್ರೀಯ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಇತರ ಎಸ್‌ಸಿಒ ರಾಷ್ಟ್ರಗಳ ಏಳು ಪ್ರತಿನಿಧಿಗಳು ಪಾಕ್ ವಿರುದ್ಧ ಪ್ರತಿಭಟಿಸಿ ಮಂಗಳವಾರ ನಡೆದ ವಿಡಿಯೊ ಕಾನ್ಫರೆನ್ಸ್‌ನಿಂದ ನಿರ್ಗಮಿಸಿದ್ದಾರೆ.

ಪಾಕಿಸ್ತಾನದ ಪ್ರತಿನಿಧಿ ಮೊಯೀದ್ ಯೂಸಫ್ ಅವರು ಸಭೆಗೆ ಹಾಜರಾದಾಗ ಅವರ ಆಸನದಹಿಂದೆಭಾರತದ ಗಡಿಭಾಗಗಳಿರುವ ಪಾಕ್ ಭೂಪಟ ಕಾಣಿಸಿತ್ತು.ಜಮ್ಮು ಮತ್ತು ಕಾಶ್ಮೀರ, ಲಡಾಕ್ ಮತ್ತು ಗುಜರಾತಿನ ಜುನಾಗಢ್ ಪ್ರದೇಶವನ್ನು ಸೇರಿಸಿದ ಪಾಕ್ ಭೂಪಟ ಅದಾಗಿತ್ತು. ಈ ಹಿಂದೆ ಭಾರತದ ಗಡಿಭಾಗಗಳನ್ನು ಸೇರಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಭೂಪಟವೊಂದನ್ನು ಬಿಡುಗಡೆ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.