ADVERTISEMENT

ಪವಾರ್‌ ದುರ್ಮರಣ: ಆಕಸ್ಮಿಕ ಸಾವು ಪ್ರಕರಣ ದಾಖಲು; ಈ ದಿನದ ಪ್ರಮುಖ 10 ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:36 IST
Last Updated 29 ಜನವರಿ 2026, 5:36 IST
<div class="paragraphs"><p>ಪವಾರ್‌ ದುರ್ಮರಣ: ಆಕಸ್ಮಿಕ ಸಾವು ಪ್ರಕರಣ ದಾಖಲು; ಈ ದಿನದ ಪ್ರಮುಖ 10 ಸುದ್ದಿಗಳು</p></div>

ಪವಾರ್‌ ದುರ್ಮರಣ: ಆಕಸ್ಮಿಕ ಸಾವು ಪ್ರಕರಣ ದಾಖಲು; ಈ ದಿನದ ಪ್ರಮುಖ 10 ಸುದ್ದಿಗಳು

   

ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ದುರ್ಮರಣ: ಆಕಸ್ಮಿಕ ಸಾವು ಪ್ರಕರಣ ದಾಖಲು

ಅಜಿತ್‌ ಪವಾರ್‌ ಮತ್ತು ಅಪಘಾತಕ್ಕೀಡಾದ ವಿಮಾನ

ADVERTISEMENT

ಪುಣೆ: ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್‌ ಮತ್ತು ಇತರ ನಾಲ್ವರು ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು ಆಕಸ್ಮಿಕ ಸಾವು ಪ್ರಕರಣ (ಎಡಿಆರ್) ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಜಿತ್ ಪವಾರ್ ಹಠಾತ್ ನಿಧನ |NCPಗೆ ಆಘಾತ; ಚುಕ್ಕಾಣಿ ಹಿಡಿಯುವರೇ ಪತ್ನಿ ಸುನೇತ್ರಾ?

ಅಜಿತ್‌ ಪವಾರ್‌ ಮತ್ತು ಸುನೇತ್ರಾ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಹಠಾತ್ ನಿಧನದಿಂದಾಗಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಕವಲುದಾರಿಯಲ್ಲಿದ್ದು, ಮುಂದೇನು? ಎಂಬ ಪ್ರಶ್ನೆ ಉದ್ಭವಿಸಿದೆ.

ಮಲಯಾಳ ಮಸೂದೆ ಬಗೆಗಿನ ಕಳವಳ ಆಧಾರರಹಿತ: ಸಿದ್ದರಾಮಯ್ಯ ಪತ್ರಕ್ಕೆ ಪಿಣರಾಯಿ

ಪಿಣರಾಯಿ

ತಿರುವನಂತಪುರ: ‘ಕೇರಳ ಸರ್ಕಾರದ ಮಲಯಾಳ ಭಾಷಾ ಮಸೂದೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ವ್ಯಕ್ತಪಡಿಸುತ್ತಿರುವ ಕಳವಳವು ಆಧಾರ ರಹಿತವಾಗಿದೆ. ಅಲ್ಲದೇ, ಮಸೂದೆಯು ಕೇರಳದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಮೇಲೆ ಮಲಯಾಳ ಹೇರಿಕೆಗೆ ಎಡೆಮಾಡುವುದಿಲ್ಲ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. 

ಟೋಲ್ ಸಂಗ್ರಹ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ GPS ಆಧಾರಿತ ವ್ಯವಸ್ಥೆ ಶೀಘ್ರ

ರಾಮನಗರ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ಟೋಲ್‌ ಪಾವತಿಸಲು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗಿಲ್ಲ. 117 ಕಿ.ಮೀ ಉದ್ದದ ಹೆದ್ದಾರಿಯಲ್ಲಿ ಜಿಪಿಎಸ್ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಜಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ.

ಚುನಾವಣಾ ತಕರಾರು ಅರ್ಜಿ: ಶಾಸಕ ರಾಮಮೂರ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

ಸಿ.ಕೆ. ರಾಮಮೂರ್ತಿ

ನವದೆಹಲಿ: ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ.

ವಿಮಾನ ಪತನ | ಅಜಿತ್‌ ಪವಾರ್‌ ದುರ್ಮರಣ: ಇಂದು ಅಂತ್ಯಕ್ರಿಯೆ; 3 ದಿನ ಶೋಕಾಚರಣೆ

ಅಜಿತ್‌ ಪವಾರ್‌ ಮತ್ತು ಅಪಘಾತಕ್ಕೀಡಾದ ವಿಮಾನ

ಪುಣೆ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್‌ (66) ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಲಘು ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.

ಭಾರತದ ಜೊತೆ ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ: ಅಮೆರಿಕ ಸಿಡಿಮಿಡಿ

ಸ್ಕಾಟ್ ಬೆಸೆಂಟ್

ವಾಷಿಂಗ್ಟನ್: ಭಾರತದ ಜೊತೆ ಪ್ರಮುಖ ವ್ಯಾಪಾರ ಒಪ್ಪಂದ ಮಾಡಿಕೊಂಡ ಐರೋಪ್ಯ ಒಕ್ಕೂಟವನ್ನು ಟೀಕಿಸಿದ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ತಾನೇ ವ್ಯಕ್ತಪಡಿಸಿದ್ದ ಉಕ್ರೇನ್ ಜನರ ಮೇಲಿನ ಕಾಳಜಿಗಿಂತ ವ್ಯಾಪಾರಕ್ಕೆ ಯುರೋಪ್ ಆದ್ಯತೆ ನೀಡಿರುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಚರ್ಚೆಯೇ ಇಲ್ಲದೆ ಮುಗಿದ ವಿಧಾನಪರಿಷತ್ ಕಲಾಪ

ವಿಧಾನ ಪರಿಷತ್‌ನಲ್ಲಿ ನಿಯಮಾವಳಿ ಪುಸ್ತಕವನ್ನು ಛಲವಾದಿ ನಾರಾಯಣಸ್ವಾಮಿ ಹರಿದು ಹಾಕಿದರು. ಉಪಸಭಾಪತಿ ಪ್ರಾಣೇಶ್ ಉಪಸ್ಥಿತರಿದ್ದರು

ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಅಡ್ಡಿ, ರಾಷ್ಟ್ರಗೀತೆಗೆ ರಾಜ್ಯಪಾಲರ ಅಗೌರವದ ಆರೋಪ, ವಿರೋಧ ಪಕ್ಷದ ನಾಯಕರು ಸದನದ ನಿಯಮಗಳ ಪುಸ್ತಕ ಹರಿದು ಹಾಕಿದ ವಿಷಯಗಳು ವಿಧಾನಪರಿಷತ್‌ನಲ್ಲಿ ದಿನಪೂರ್ತಿ ಗದ್ದಲ, ಆಕ್ರೋಶ, ಆರೋಪ, ವಾಗ್ವಾದಕ್ಕೆ ಕಾರಣವಾಗಿ, ಬುಧವಾರದ ಕಲಾಪ ಚರ್ಚೆಯಿಲ್ಲದೆ ಮುಗಿಯಿತು.

ಮುಡಾ ಪ್ರಕರಣ: ಸಿದ್ದರಾಮಯ್ಯ ಸದ್ಯ ನಿರಾಳ

ಸಿದ್ದರಾಮಯ್ಯ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ನಿವೇಶನ ಪಡೆದಿದ್ದಾರೆಂದು ಆರೋಪಿಸಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎಂ.ಪಾರ್ವತಿ ಸೇರಿದಂತೆ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. ಹೀಗಾಗಿ, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಸದ್ಯಕ್ಕೆ ನಿರಾಳರಾಗಿದ್ದಾರೆ.

₹400 ಕೋಟಿ ದರೋಡೆ: ದೂರು ನೀಡಲು ಸಿದ್ಧ ಎಂದ ಸಂದೀಪ್‌ ಪಾಟೀಲ

ಎಐ ಚಿತ್ರ

ಬೆಳಗಾವಿ: ‘₹400 ಕೋಟಿ ದರೋಡೆ ಬಗ್ಗೆ ಬೆಳಗಾವಿ ಪೊಲೀಸರು ತನಿಖೆ ಮಾಡುವ ಭರವಸೆ ನೀಡಿದರೆ, ನಾನು ಖುದ್ದಾಗಿ ದೂರು ದಾಖಲಿಸುತ್ತೇನೆ’ ಎಂದು ಪ್ರಕರಣದಲ್ಲಿ ಅಪಹರಣವಾಗಿ ಬಿಡುಗಡೆಯಾಗಿರುವ ಸಂದೀಪ್‌ ಪಾಟೀಲ ಬುಧವಾರ ನಾಸಿಕ್‌ನಲ್ಲಿ ತಿಳಿಸಿದ್ದಾರೆ.

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.