
ಆಕಾಶ್-ಎನ್‌ಜಿ ಕ್ಷಿಪಣಿ
(ಪಿಟಿಐ ಚಿತ್ರ)
ನವದೆಹಲಿ: ಮುಂದಿನ ತಲೆಮಾರಿನ ಆಕಾಶ್-ಎನ್‌ಜಿ ಕ್ಷಿಪಣಿ ವ್ಯವಸ್ಥೆಯ ಬಳಕೆದಾರ ಮೌಲ್ಯಮಾಪನ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ದೇಶದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಧೆ (ಡಿಆರ್‌ಡಿಒ) ತಿಳಿಸಿದೆ.
ಈ ಸಂಬಂಧ ವಿಡಿಯೊವನ್ನು ಡಿಆರ್‌ಡಿಎ ಹಂಚಿಕೊಂಡಿದೆ. ಹೆಚ್ಚಿನ ವೇಗದಲ್ಲಿ, ಕಡಿಮೆ ಎತ್ತರ ಹಾಗೂ ದೀರ್ಘ ಶ್ರೇಣಿ ಸೇರಿದಂತೆ ವಿವಿಧ ವೈಮಾನಿಕ ಗುರಿಗಳನ್ನು ಅತ್ಯಂತ ನಿಖರತೆಯಿಂದ ನಾಶಪಡಿಸಲಾಗಿದೆ ಎಂದು ಹೇಳಿದೆ.
ಆಕಾಶ್ ಎನ್‌ಜಿ ಪಿಎಸ್‌ಕ್ಯೂಆರ್ ಮಾನದಂಡಗಳನ್ನು ಪೂರೈಸಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.
ವಿವಿಧ ಶ್ರೇಣಿಯ ವೈಮಾನಿಕ ಬೆದರಿಕೆಗಳ ವಿರುದ್ಧ ವಾಯು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಆಕಾಶ್ ಎನ್‌ಜಿ ಕ್ಷಿಪಣಿ ಪ್ರಬಲ ವ್ಯವಸ್ಥೆಯಾಗಿದೆ ಎಂದು ತಿಳಿಸಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೊ ಫ್ರೀಕ್ವೆನ್ಸಿ ಅನ್ವೇಷಕ, ಡ್ಯುಯಲ್ ಪಲ್ಸ್ ಸಾಲಿಡ್ ರಾಕೆಟ್ ಮೋಟಾರ್, ಸ್ವದೇಶಿ ರಾಡಾರ್ ಮತ್ತು ಸಿ2 ವ್ಯವಸ್ಥೆಯನ್ನು ಆಕಾಶ್ ಎನ್‌ಜಿ ಕ್ಷಿಪಣಿ ಹೊಂದಿದೆ.
ಆಕಾಶ್-ಎನ್‌ಜಿ ಕ್ಷಿಪಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.