ADVERTISEMENT

ರೈತನ ಮೇಲೆ ಹಲ್ಲೆ: ಬಿಜೆಪಿ ‘ಶ್ರೀಮಂತರ ಪಕ್ಷ‘ ಎಂದ ಅಖಿಲೇಶ್‌ ಯಾದವ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 4:00 IST
Last Updated 21 ಡಿಸೆಂಬರ್ 2024, 4:00 IST
<div class="paragraphs"><p>ಅಖಿಲೇಶ್‌ ಯಾದವ್‌</p></div>

ಅಖಿಲೇಶ್‌ ಯಾದವ್‌

   

ಲಖನೌ: ಬಿಜೆಪಿ ಪಕ್ಷವು ಬಡವರು, ರೈತರು ಮತ್ತು ದುರ್ಬಲರನ್ನು ನಿರ್ಲಕ್ಷಿಸುವ ಮೂಲಕ ಶ್ರೀಮಂತರ ಪಕ್ಷವಾಗಿ ಹೊರಹೊಮ್ಮಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ.

ಅಮೇಠಿಯಲ್ಲಿ ಕಂದಾಯ ಅಧಿಕಾರಿಯೊಬ್ಬರು ರೈತನ ಮೇಲೆ ಹಲ್ಲೆ ನಡೆಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಘಟನೆಯನ್ನು ಖಂಡಿಸಿ, ಅಖಿಲೇಶ್‌ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ADVERTISEMENT

'ಇದು ಬಿಜೆಪಿ ಸರ್ಕಾರದ ನಿಜವಾದ ' ಕಿಸಾನ್ ಸಮ್ಮಾನ್' ವಿಡಿಯೊ. ಬಿಜೆಪಿ ರೈತ ವಿರೋಧಿ ನೀತಿಯನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದೆ.. ಶ್ರೀಮಂತರ ಹಿತಾಸಕ್ತಿಗಳಿಗೆ ಮನ್ನಣೆ ನೀಡುವ ಬಿಜೆಪಿ ಸರ್ಕಾರ, ಬಡವರ,ರೈತರ, ದುರ್ಬಲರನ್ನು ಕಡೆಗಣಿಸುವುದಲ್ಲದೇ, ಅವರನ್ನು ಸದಾ ಅಪಮಾನ, ಅವಮಾನಗಳಿಗೆ ಗುರಿಯಾಗಿಸಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಲ ಪಾವತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ತಂಡದವರು ರೈತನೊಂದಿಗೆ ಮಾತಿನ ಜಟಾಪಟಿಗೆ ಇಳಿದಿದ್ದಾರೆ. ಈ ವೇಳೆ ರೈತನ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.