ADVERTISEMENT

ಊಟದಲ್ಲಿ ಗೋಮಾಂಸ; ರಣರಂಗವಾದ ಮದುವೆ ಮನೆ: ವಿಧಿವಿಜ್ಞಾನ ಪರೀಕ್ಷೆಗೆ ಮಾದರಿ ರವಾನೆ

ಪಿಟಿಐ
Published 1 ಡಿಸೆಂಬರ್ 2025, 10:19 IST
Last Updated 1 ಡಿಸೆಂಬರ್ 2025, 10:19 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಅಲಿಗಢ: ಮದುವೆ ಊಟದಲ್ಲಿ ಗೋಮಾಂಸ ಬಡಿಸಲಾಗುತ್ತಿದೆ ಎನ್ನುವ ವಿಷಯ ಗಲಭೆಗೆ ಕಾರಣವಾಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ಜರುಗಿದೆ.

ಅಲಿಗಢದ ಸಿವಿಲ್‌ ಲೈನ್‌ನಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಘಟನೆ ಜರುಗಿದೆ. ಊಟದ ಕೌಂಟರ್‌ನಲ್ಲಿ ‘ಬೀಫ್ ಕರಿ’ ಎಂದು ಬರೆದಿರುವುದಕ್ಕೆ ಮದುವೆಗೆ ಬಂದಿದ್ದ ಇಬ್ಬರು ಅತಿಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಉತ್ತರ ಪ್ರದೇಶದಲ್ಲಿ ಗೋಮಾಂಸ ನಿಷೇಧವಿದೆ. ಆದರೆ, ಎಮ್ಮೆ ಮಾಂಸಕ್ಕೆ ಯಾವುದೇ ನಿಷೇಧವಿಲ್ಲ. ಮದುವೆ ಮನೆಯಲ್ಲಿನ ಅಡುಗೆಯಲ್ಲಿ ಬಳಸಿರುವ ‘ಬೀಫ್ ಕರಿ’ ಯಾವುದು ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿರುವ ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಅಧಿಕಾರಿಗಳು ಮಾದರಿಯನ್ನು ಸಂಗ್ರಹಿಸಿಕೊಂಡಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಧಾರ್ಮಿಕ ನಂಬಿಕೆಗಳಿಗೆ ಅಗೌರವ ತೋರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.