ADVERTISEMENT

ಮಸೀದಿಯಲ್ಲಿ ಧ್ವನಿವರ್ಧಕ ಅಳವಡಿಕೆಗೆ ಅನುಮತಿಸಲು ಅಲಹಾಬಾದ್ ಹೈಕೋರ್ಟ್ ನಕಾರ

ಪಿಟಿಐ
Published 25 ಜನವರಿ 2025, 2:25 IST
Last Updated 25 ಜನವರಿ 2025, 2:25 IST
<div class="paragraphs"><p>ಧ್ವನಿವರ್ಧಕ </p></div>

ಧ್ವನಿವರ್ಧಕ

   

ಪ್ರಯಾಗರಾಜ್‌: ಮಸೀದಿಯೊಂದರಲ್ಲಿ ಧ್ವನಿವರ್ಧಕ ಅಳವಡಿಸಲು ಅನುಮತಿಸಬೇಕು ಎಂದು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

‘ಧಾರ್ಮಿಕ ಸ್ಥಳಗಳು ಇರುವುದು ದೇವರಿಗೆ ಪ್ರಾರ್ಥನೆ ಸಲ್ಲಿಸಲು. ಹೀಗಾಗಿ ಧ್ವನಿವರ್ಧಕ ಅಳವಡಿಕೆ ಹಕ್ಕಿನ ಭಾಗವಾಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ADVERTISEMENT

ಫಿಲಿಬಿತ್ ನಿವಾಸಿ ಮುಖ್ತಿಯಾರ್ ಅಬ್ಬಾಸ್‌ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಹಾಗೂ ದೊಂಡಾಯ್ ರಮೇಶ್‌ ದ್ವಿಸದಸ್ಯ ಪೀಠ, ‘ಧ್ವನಿವರ್ಧಕ ಬಳಕೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತದೆ’ ಎಂದು ಹೇಳಿದೆ.

ಅರ್ಜಿದಾರ ಮುತವಲ್ಲಿಯೂ ಅಲ್ಲ, ಮಸೀದಿ ಕೂಡ ಅವರಿಗೆ ಸೇರಿಲ್ಲ ಎಂದು ಹೇಳಿದ ಸರ್ಕಾರಿ ವಕೀಲರು, ಅಬ್ಬಾಸ್‌ ಅವರು ಸಲ್ಲಿಸಿರುವ ರಿಟ್ ಅರ್ಜಿಯ ಔಚಿತ್ಯವನ್ನು ಪ್ರಶ್ನಿಸಿದರು.

ಅರ್ಜಿದಾರರಿಗೆ ಸೇರಿದ ಮಸೀದಿ ಅಲ್ಲ ಎನ್ನುವುದನ್ನು ಕೋರ್ಟ್ ಗಮನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.