ADVERTISEMENT

ದೆಹಲಿಯಲ್ಲಿ ಅಂಬೇಡ್ಕರ್ ಅಂತ್ಯಕ್ರಿಯೆ ನಡೆಸಲು ಬಿಡದ ಕಾಂಗ್ರೆಸ್: UP ಸಿಎಂ ಯೋಗಿ

ಪಿಟಿಐ
Published 13 ಏಪ್ರಿಲ್ 2025, 10:40 IST
Last Updated 13 ಏಪ್ರಿಲ್ 2025, 10:40 IST
<div class="paragraphs"><p>ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್</p></div>

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

   

ಪಿಟಿಐ

ಲಖನೌ: ಕಾಂಗ್ರೆಸ್‌ ಪಕ್ಷವು ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಸೂಕ್ತ ಗೌರವ ನೀಡಿಲ್ಲ ಎಂದು ಆರೋಪ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆ (ಕಾಂಗ್ರೆಸ್‌) ಪಕ್ಷವು ಸಂವಿಧಾನ ಶಿಲ್ಪಿಯ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲಿ ನಡೆಸಲು ಹಾಗೂ ಸ್ಮಾರಕ ನಿರ್ಮಿಸಲು ಅವಕಾಶ ನೀಡಲಿಲ್ಲ ಎಂದು ಕಿಡಿಕಾರಿದ್ದಾರೆ.

ADVERTISEMENT

'ಭಾರತ ರತ್ನ' ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಮ್ಮಾನ ಸಮಾರೋಹ್‌ ಭಾಗವಾಗಿ ಲಖನೌನಲ್ಲಿ ಭಾನುವಾರ ನಡೆದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ್ದಾರೆ.

ಕಾಂಗ್ರೆಸ್‌ ನಾಯಕರನ್ನುದ್ದೇಶಿಸಿ, 'ಮೊದಲು ಅವರು ಚುನಾವಣೆಯಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಸೋಲುವಂತೆ ಮಾಡಿದರು. ಅವರು (ಅಂಬೇಡ್ಕರ್‌) ಮಹಾಪರಿನಿರ್ವಾಣ ಹೊಂದಿದ ನಂತರ, ದೆಹಲಿಯಲ್ಲಿ ಅಂತ್ಯ ಸಂಸ್ಕಾರ ನೆರವೇರದಂತೆ ಮಾಡಿದರು. ಸ್ಮಾರಕ ನಿರ್ಮಾಣಕ್ಕೂ ಅವಕಾಶ ನೀಡಲಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.

ಅಂಬೇಡ್ಕರ್‌ ಅವರು 1956ರ ಡಿಸೆಂಬರ್‌ 6ರಂದು ದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಮಹಾರಾಷ್ಟ್ರದ ಮುಂಬೈನಲ್ಲಿರುವ ಚೈತ್ಯ ಭೂಮಿಯಲ್ಲಿ, ಬೌದ್ಧ ಧರ್ಮದ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.