ನವದೆಹಲಿ: ವಿಮಾನ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸದ ಆರೋಪದ ಮೇಲೆ ಮಹಿಳಾ ಪ್ರಯಾಣಿಯರೊಬ್ಬರನ್ನು ವಿಮಾನದಿಂದ ಕೆಳಗಿಳಿಸಿರುವ ಘಟನೆಯು ದೆಹಲಿಯಲ್ಲಿ ಜನವರಿ 30ರಂದು ನಡೆದಿದೆ.
ದೆಹಲಿಯಿಂದ ನ್ಯೂಯಾರ್ಕ್ಗೆ ತೆರಳುತ್ತಿದ್ದ ಅಮೆರಿಕನ್ ಏರ್ಲೈನ್ಸ್ನ ವಿಮಾನವೊಂದರಲ್ಲಿ ಈ ಘಟನೆ ನಡೆದಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಈ ಘಟನೆ ಕುರಿತು ವರದಿ ನೀಡುವಂತೆ ಅಮೆರಿಕನ್ ಏರ್ಲೈನ್ಸ್ಗೆ ಕೇಳಿದೆ.
ವಿಮಾನದಿಂದ ಕೆಳಗಿಳಿಸಲಾದ ಮಹಿಳೆಯನ್ನು ಮೀನಾಕ್ಷಿ ಸೇನ್ಗುಪ್ತ ಎಂದು ಗುರುತಿಸಲಾಗಿದೆ. ಈ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. ‘ನಾನು ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದ ಕಾರಣ ಕೈಚೀಲವನ್ನು ಮೇಲೆ ಎತ್ತಿಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸಹಾಯ ಮಾಡುವಂತೆ ಸಿಬ್ಬಂದಿಗೆ ಕೇಳಿಕೊಂಡೆ. ಆದರೆ ಅವರು ನಿರಾಕರಿಸಿದರು. ಮತ್ತೆ ಮತ್ತೆ ಸಹಾಯಕ್ಕಾಗಿ ಅಂಗಲಾಚಿದಾಗ ವಿಮಾನದಿಂದ ಕೆಳಗಿಳಿಯುವಂತೆ ಹೇಳಿದರು’ ಎಂದಿದ್ದಾರೆ.
ಈ ಕುರಿತು ದೆಹಲಿ ಪೊಲೀಸರು ಮತ್ತು ಯುಎಸ್ ಸಿವಿಲ್ ಏರ್ಗೆ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.