ADVERTISEMENT

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ AC ವೈಫಲ್ಯ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2025, 11:39 IST
Last Updated 14 ಮೇ 2025, 11:39 IST
<div class="paragraphs"><p>ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಎಸಿ ವೈಫಲ್ಯದಿಂದಾಗಿ ಪ್ರಯಾಣಿಕರು </p></div>

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಎಸಿ ವೈಫಲ್ಯದಿಂದಾಗಿ ಪ್ರಯಾಣಿಕರು

   

Credit: LinkdIn/ Tusharkant Rout

ನವದೆಹಲಿ: ದೆಹಲಿಯಿಂದ ಭುವನೇಶ್ವರಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ (IX-1128) ಹವಾನಿಯಂತ್ರಣ ವ್ಯವಸ್ಥೆಯ (ಎಸಿ) ವೈಫಲ್ಯದಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.

ADVERTISEMENT

ಎಸಿ ವೈಫಲ್ಯದಿಂದಾಗಿ ಪುರುಷರು ಶರ್ಟ್‌ಗಳನ್ನು ತೆಗೆದುಹಾಕಿ ಪರದಾಡಿದ್ದಾರೆ. ಇತ್ತ ಮಹಿಳೆಯರು ದಿನ ಪತ್ರಿಕೆ, ನಿಯತಕಾಲಿಕೆಗಳನ್ನು ಬಳಸಿಕೊಂಡು ಗಾಳಿ ಬೀಸಿಕೊಂಡಿದ್ದಾರೆ.

ತುಷಾರ್ಕಾಂತ್ ರೌಟ್ ಎಂಬುವರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಕರು ಅನುಭವಿಸಿದ ಅಸಹನೀಯ ಘಟನೆಯ ಚಿತ್ರಗಳನ್ನು ಲಿಂಕ್ಡ್ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ, ಉಸಿರುಕಟ್ಟುವ ಶಾಖದಿಂದಾಗಿ ಸಹ ಪ್ರಯಾಣಿಕರ ಆರೋಗ್ಯವು ತುಂಬಾ ಹದಗೆಟ್ಟಿದೆ ಎಂದು ಅವರು ವಿವರಿಸಿದ್ದಾರೆ.

ಈ ವಿಮಾನವು ಮೇ 11ರಂದು ಸಂಜೆ 4 ಗಂಟೆಗೆ ಸುಮಾರಿಗೆ ದೆಹಲಿಯಿಂದ ಭುವನೇಶ್ವರಕ್ಕೆ ಹೊರಟಿತ್ತು. ಮಾರ್ಗ ಮಧ್ಯ ಹವಾನಿಯಂತ್ರಣ ವ್ಯವಸ್ಥೆ (ಎಸಿ) ಕಾರ್ಯನಿರ್ವಹಿಸುವುದು ನಿಂತಿತ್ತು. ಪ್ರಯಾಣಿಕರು ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ವಿಮಾನವು ಲ್ಯಾಂಡ್‌ ಆಗುವವರೆಗೂ ಸುಮಾರು ಎರಡು ಗಂಟೆಗಳ ಕಾಲ ಸೆಕೆ ಹಾಗೆಯೇ ಇತ್ತು.

ಪ್ರಯಾಣಿಕರು ತೀವ್ರ ಸೆಕೆಯಿಂದ ಬಳಲುತ್ತಿದ್ದು, ಪ್ರಯಾಣಿಕರೊಬ್ಬರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು ಎಂದು ತುಷಾರ್ಕಾಂತ್ ಲಿಂಕ್ಡ್‌ಇನ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.