ಜಬಲ್ಪುರ: ‘ಭಾರತ–ಪಾಕಿಸ್ತಾನ ನಡುವಣ 1971ರ ಯುದ್ಧದ ವೇಳೆ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಅಮೆರಿಕದ ಒತ್ತಡಕ್ಕೆ ಮಣಿದಿರಲಿಲ್ಲ’ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಕಮಲ್‌ನಾಥ್ ಇಲ್ಲಿ ನಡೆದ ರ‍್ಯಾಲಿಯಲ್ಲಿ ಹೇಳಿದ್ದಾರೆ.
ಭಾರತ–ಪಾಕ್ ನಡುವಣ ಸೇನಾ ಸಂಘರ್ಷದ ವೇಳೆ ಕದನವಿರಾಮಕ್ಕೆ ನಾನು ಮಧ್ಯಸ್ಥಿಕೆ ವಹಿಸಿದ್ದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಯ ಹಿನ್ನಲೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.
‘ನಾನು 1971ರ ಯುದ್ಧ ನೋಡಿದ್ದೇನೆ. ಇಂದಿರಾಗಾಂಧಿ ಅವರ ಸಾಮರ್ಥ್ಯ ಗಮನಿಸಿದ್ದೇನೆ. ಆಗ ಪಾಕಿಸ್ತಾನ ಬೆಂಬಲಿಸಿದ್ದ ಅಮೆರಿಕ, ವಿವಿಧೆಡೆಯಿಂದ ಭಾರತದ ಮೇಲೆ ಒತ್ತಡ ಹೇರಿತ್ತು. ಆದರೆ, ಇದಕ್ಕೆ ಇಂದಿರಾಗಾಂಧಿ ಮಣಿದಿರಲಿಲ್ಲ’ ಎಂದು ಹೇಳಿದರು.
ಮಧ್ಯಸ್ಥಿಕೆ ವಹಿಸಿದ್ದೆ ಎಂದು ಟ್ರಂಪ್ ಪುನರುಚ್ಚರಿಸಿದ್ದರೆ, ಆಪರೇಷನ್ ಸಿಂಧೂರ ನಿಲ್ಲಿಸಲು ಪಾಕ್ ಅಂಗಲಾಚಿತ್ತು ಎಂದು ಪ್ರಧಾನಿ ಮೋದಿ ಕಾನ್ಪುರದಲ್ಲಿ ಶುಕ್ರವಾರ ಹೇಳಿದ್ದರು.
ಸಿಂಧೂರ ಕಾರ್ಯಾಚರಣೆಯ ಯಶಸ್ಸಿನ ಹಿನ್ನಲೆಯಲ್ಲಿ ಸೇನೆಗೆ ಕೃತಜ್ಞತೆ ಸಲ್ಲಿಸಲು ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ‘ಜೈಹಿಂದ್ ಸಭಾ’ ರ‍್ಯಾಲಿಯನ್ನು ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.