ADVERTISEMENT

ಪಶ್ಚಿಮ ಬಂಗಾಳ: ಚುನಾವಣಾ ಸೆಣಸಾಟದಲ್ಲಿ ಮಮತಾಗೆ ಸೋಲಾಗಿದೆ ಎಂದ ಅಮಿತ್ ಶಾ

ಪಿಟಿಐ
Published 2 ಏಪ್ರಿಲ್ 2021, 14:22 IST
Last Updated 2 ಏಪ್ರಿಲ್ 2021, 14:22 IST
ಅಮಿತ್ ಶಾ
ಅಮಿತ್ ಶಾ   

ಕೋಲ್ಕತ್ತ: ಚುನಾವಣಾ ಸೆಣಸಾಟದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋಲನುಭವಿಸಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ ಮತ್ತು ಹೂಗ್ಲಿ ಜಿಲ್ಲೆಯ ಅರಂಬಾಘ್‌ನಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಮೊದಲ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆಯಾಗಲಿದೆ. ಮಹಿಳೆಯರ ಸುರಕ್ಷತೆಗೆ ಪಕ್ಷವು ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಹೇಳಿದ್ದಾರೆ.

ಪಕ್ಷದ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಮೊದಲ ಎರಡು ಹಂತಗಳಲ್ಲಿ ಚುನಾವಣೆ ನಡೆದ 60 ಕ್ಷೇತ್ರಗಳ ಪೈಕಿ 50ರಲ್ಲಿ ಬಿಜೆಪಿಯು ಜಯಗಳಿಸಲಿದೆ. ಪಕ್ಷವು 200ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯವರು ನಂದಿಗ್ರಾಮದಲ್ಲಿ ಜಯಗಳಿಸಲಿದ್ದೇನೆ ಎಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಶಾ, ಅವರು (ಮಮತಾ) ಸೋಲನುಭವಿಸಿ ಆಗಿದೆ. ಇದೀಗ ಬೇರೆ ಆಯ್ಕೆಗಳಿಲ್ಲದೆ ಅಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.