ADVERTISEMENT

850 ರೈತರ ಸಾಲ ಪಾವತಿಸಲಿರುವ ಅಮಿತಾಬ್‌ ಬಚ್ಚನ್

ಪಿಟಿಐ
Published 19 ಅಕ್ಟೋಬರ್ 2018, 19:48 IST
Last Updated 19 ಅಕ್ಟೋಬರ್ 2018, 19:48 IST
Indian Bollywood actor Amitabh Bachchan gestures as he attends the trailer launch of the forthcoming Hindi film ‘TE3N’ directed by Ribhu Dasgupta and produced by Sujoy Ghosh in Mumbai on May 5, 2016. / AFP PHOTO / STR
Indian Bollywood actor Amitabh Bachchan gestures as he attends the trailer launch of the forthcoming Hindi film ‘TE3N’ directed by Ribhu Dasgupta and produced by Sujoy Ghosh in Mumbai on May 5, 2016. / AFP PHOTO / STR   

ಮುಂಬೈ: ಉತ್ತರ ಪ್ರದೇಶದ ಸುಮಾರು 850 ರೈತರ ಸಾಲವನ್ನು ತಾವೇ ಪಾವತಿಸುವುದಾಗಿ ಖ್ಯಾತ ಹಿಂದಿ ಚಲನ ಚಿತ್ರ ನಟ ಅಮಿತಾಬ್‌ ಬಚ್ಚನ್‌ ತಿಳಿಸಿದ್ದಾರೆ.

‘ಮಹಾರಾಷ್ಟ್ರದ 350 ರೈತರ ಸಾಲವನ್ನು ತೀರಿಸಿ ಅವರಿಗೆ ಈ ಹಿಂದೆ ನೆರವಾಗಿದ್ದೆ. ಈ ರೈತರು ಸಾಲ ಮರುಪಾವತಿಸಲು ಸಾಧ್ಯವಾಗದಷ್ಟು ಸಂಕಷ್ಟಕ್ಕೆ ಸಿಲುಕಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳದಂತೆ ಕೆಲವು ದಿನಗಳ ಹಿಂದೆ ಈ ರೈತರ ಸಾಲವನ್ನು ಪಾವತಿಸಲಾಯಿತು.

ಈ ಮೊದಲು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರದೇಶದ ರೈತರ ಸಾಲ ತೀರಿಸಿ ನೆರವಾಗಿದ್ದೆ. ಈಗ ಉತ್ತರ ಪ್ರದೇಶದ 850 ರೈತರನ್ನು ಗುರುತಿಸಲಾಗಿದೆ. ಈ ರೈತರ ಸಾಲ ₹5.5 ಕೋಟಿಯಾಗುತ್ತದೆ. ಈ ಸಾಲವನ್ನು ನಾನೇ ತೀರಿಸುತ್ತೇನೆ’ ಎಂದು ಬ್ಲಾಗ್‌ನಲ್ಲಿ ಅಮಿತಾಬ್‌ ಬರೆದಿದ್ದಾರೆ.

ADVERTISEMENT

‘ರೈತರಿಗೆ ನೆರವಾಗಿದ್ದು ತೃಪ್ತಿ ತಂದಿದೆ. ಇದೇ ರೀತಿ ನಮಗಾಗಿ ಎಲ್ಲ ರೀತಿಯಲ್ಲೂ ತ್ಯಾಗ ಮಾಡುವವರಿಗಾಗಿ ನೆರವು ನೀಡುವುದು ಅಗತ್ಯವಿದೆ. ದೇಶದ ಇತರ ಭಾಗಗಳಲ್ಲಿ ಸಂಕಷ್ಟದಲ್ಲಿರುವವವರಿಗೆ ನೆರವು ನೀಡಬೇಕು. ಮುಂದಿನ ದಿನಗಳಲ್ಲಿ ಈ ಕಾರ್ಯ ನಡೆಯಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.