
ನವದೆಹಲಿ: ‘ತಾಂತ್ರಿಕ ಕ್ರಾಂತಿಯು ಉದ್ಯೋಗ ನಷ್ಟದ ಬದಲು ವಿಭಿನ್ನ ರೀತಿಯ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ’ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಮಂಗಳವಾರ ಇಲ್ಲಿ ಹೇಳಿದರು.
ಇಂಡಿಯಾ ಎ.ಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದ ಉದ್ಯೋಗ ನಷ್ಟ’ ಎಂಬುದನ್ನು ತಳ್ಳಿಹಾಕಿದರು.
‘ಬೃಹತ್ ತಂತ್ರಜ್ಞಾನ ಸಂಸ್ಥೆಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವ ಬದಲು, ಜನರ ಜೀವನಮಟ್ಟ ಸುಧಾರಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದೇ ಎ.ಐ ಯಶಸ್ಸಿನ ನಿಜವಾದ ಮಾನದಂಡ ಆಗಿರಬೇಕು’ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಗೆ ಭಾರತ ಹೆಚ್ಚಿನ ದತ್ತಾಂಶ ಕೊಡುಗೆ ನೀಡುತ್ತಿದೆ ಎಂದರು.
ನೀಲನಕ್ಷೆ ಅನುಸರಿಸಲಿ: ‘ಡಿಜಿಟಲ್ ಮೂಲಸೌರ್ಕಯದ ನೀಲನಕ್ಷೆಯನ್ನು ಕೃತಕ ಬುದ್ಧಿಮತ್ತೆ (ಎ.ಐ) ಅನುಸರಿಸಬೇಕು. ಭಾರತದಲ್ಲಿ ಎಐ ಅಭಿವೃದ್ಧಿಯ ಮೂಲಗಳು ಮುಕ್ತವಾಗಿರಬೇಕು’ ಎಂದು ಹೇಳಿದರು.
ಯಾವೊಂದೂ ನಿಬಂಧನೆಗೆ ಒಳಪಡದೆ ಡಿಜಿಟಲ್ ಮೂಲಸೌಕರ್ಯ ಸೃಷ್ಟಿಗಾಗಿ ಬಳಕೆಯಾಗುವ ಎ.ಐ, ಅಸಮಾನತೆಯ ಸಮಾಜ ಸೃಷ್ಟಿಸುತ್ತದೆ ಎಂದೂ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.