ADVERTISEMENT

ಹುಲಿಗೆ ಬಲಿ: ಪರಿಹಾರ ಹೆಚ್ಚಳಕ್ಕೆ ಚಿಂತನೆ

ಪಿಟಿಐ
Published 28 ನವೆಂಬರ್ 2018, 20:11 IST
Last Updated 28 ನವೆಂಬರ್ 2018, 20:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹುಲಿ ಬಾಯಿಗೆ ತುತ್ತಾದವರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು ಈಗಿರುವ ₹ 10 ಲಕ್ಷದಿಂದ ₹ 15 ಲಕ್ಷಕ್ಕೆ ಏರಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.

ಜೊತೆಗೆ, ಹುಲಿಗಳಿಂದ ಪ್ರಾಣ ಕಳೆದುಕೊಳ್ಳುವ ಜಾನುವಾರುಗಳ ಮಾಲೀಕರಿಗೆ ಪ್ರಸ್ತುತ ನೀಡುತ್ತಿರುವ ಪರಿಹಾರವನ್ನು ₹ 40 ಸಾವಿರದಿಂದ ₹ 60 ಸಾವಿರಕ್ಕೆ ಏರಿಸುವ ಉದ್ದೇಶವೂ ಸರ್ಕಾರಕ್ಕಿದೆ.

ನರಭಕ್ಷಕ ಹೆಣ್ಣು ಹುಲಿ ಅವನಿಯನ್ನು ಕೊಂದು ಹಾಕಿದ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಅರಣ್ಯ ಸಚಿವ ಸುಧೀರ್‌ ಮುಂಗಂಟಿವಾರ್‌ ಈ ವಿಷಯ ತಿಳಿಸಿದರು.

ADVERTISEMENT

ಅವನಿಯನ್ನು ಸಜೀವವಾಗಿ ಹಿಡಿಯದೆ ಆಕೆಯನ್ನು ಗುಂಡು ಹಾರಿಸಿ ಕೊಂದ ಸರ್ಕಾರದ ನಡೆಗೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.