ADVERTISEMENT

ಶಂಕಿತರ ಸುಳಿವು ನೀಡಿದವರಿಗೆ ₹50 ಲಕ್ಷ

ಅಮೃತ್‌ಸರ ಬಾಂಬ್‌ ಸ್ಫೋಟ

ಪಿಟಿಐ
Published 19 ನವೆಂಬರ್ 2018, 19:36 IST
Last Updated 19 ನವೆಂಬರ್ 2018, 19:36 IST
ಅಮರಿಂದರ್‌ಸಿಂಗ್
ಅಮರಿಂದರ್‌ಸಿಂಗ್   

ಚಂಡಿಗಡ :ಅಮೃತಸರದ ನಿರಂಕಾರಿ ಪಂಥದ ಪ್ರಾರ್ಥನಾ ಮಂದಿರದ ಮೇಲೆ ಭಾನುವಾರ ಗ್ರನೇಡ್ ದಾಳಿಯಲ್ಲಿ ಭಾಗಿಯಾದವರ ಬಗ್ಗೆ ಸುಳಿವು ನೀಡುವ ವ್ಯಕ್ತಿಗಳಿಗೆ ₹50 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ಸಿಂಗ್‌ ಘೋಷಿಸಿದ್ದಾರೆ.

ಪಂಜಾಬ್‌ ಪೊಲೀಸರ ಸಹಾಯವಾಣಿ –181ಕ್ಕೆ ಮಾಹಿತಿ ನೀಡಬಹುದಾಗಿದ್ದು, ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಘಟನಾ ನಡೆದ ಸ್ಥಳಕ್ಕೆ ರಾಷ್ಟ್ರೀಯ ತನಿಖಾದಳ (ಎನ್‌ಐಎ) ಹಾಗೂ ಸ್ಫೋಟ ತಜ್ಞರು ಭಾನುವಾರವೇ ಭೇಟಿನೀಡಿ ಮಾಹಿತಿ ಕಲೆಹಾಕಿದ್ದು, ಪಂಜಾಬ್‌ ಪೊಲೀಸ್‌ ಘಟಕದ ಹಿರಿಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು.

ADVERTISEMENT

ನಿರಂಕಾರಿ ಭವನದ ಮೇಲೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟು, 10 ಜನರಿಗೆ ಗಾಯಗಳಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.