ADVERTISEMENT

Jaya Jaya he Telangana: ತೆಲಂಗಾಣ ರಾಜ್ಯ ಗೀತೆ ರಚನೆಕಾರ, ಕವಿ ಅಂದೇ ಶ್ರೀ ನಿಧನ

ಪಿಟಿಐ
Published 10 ನವೆಂಬರ್ 2025, 8:08 IST
Last Updated 10 ನವೆಂಬರ್ 2025, 8:08 IST
<div class="paragraphs"><p>ಕವಿ ಅಂದೇ ಶ್ರೀ</p></div>

ಕವಿ ಅಂದೇ ಶ್ರೀ

   

X/@Bmaheshgoud6666

ಹೈದರಾಬಾದ್: ತೆಲಂಗಾಣದ ರಾಜ್ಯಗೀತೆ ಗೀತೆ 'ಜಯ ಜಯ ಹೇ ತೆಲಂಗಾಣ'ದ ರಚನೆಕಾರ, ಖ್ಯಾತ ಕವಿ ಅಂದೇ ಶ್ರೀ (64) ಇಂದು (ಸೋಮವಾರ) ನಿಧನರಾಗಿದ್ದಾರೆ.

ADVERTISEMENT

ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿಯೇ ಕುಸಿದು ಬಿದ್ದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೃದಯಾಘಾತವೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಅಂದೇ ಶ್ರೀ ನಿಜವಾದ ಹೆಸರು ಅಂದೇ ಯೆಲ್ಲಯ್ಯ. ತೆಲಂಗಾಣ ರಾಜ್ಯ ರಚನೆ ಆಂದೋಲನದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

2023ರ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಂದೇ ಶ್ರೀ ಅವರ 'ಜಯ ಜಯ ಹೇ ತೆಲಂಗಾಣ' ಗೀತೆಯನ್ನು ರಾಜ್ಯ ಗೀತೆ ಎಂದು ಘೋಷಿಸಿತ್ತು.

ಇವರ ನಿಧನಕ್ಕೆ ಮುಖ್ಯಮಂತ್ರಿ ಎ .ರೇವಂತ್ ರೆಡ್ಡಿ, ಕೇಂದ್ರ ಕಲ್ಲಿದ್ದಲು ಸಚಿವ ಜಿ. ಕಿಶನ್ ರೆಡ್ಡಿ, ರಾಜ್ಯ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್, ಬಿಆರ್‌ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಸೇತಿದಂತೆ ಇತರ ನಾಯಕರು ಸಂತಾಪ ಸೂಚಿಸಿದ್ದಾರೆ.

ಅಂದೇ ಶ್ರೀ ಅವರ ನಿಧನದಿಂದ ತೆಲಂಗಾಣ ಸಾಹಿತ್ಯ ಲೋಕಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಅಧಿಕೃತ ಸರ್ಕಾರಿ ಗೌರವಗಳೊಂದಿಗೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.