ADVERTISEMENT

ಆಂಧ್ರಪ್ರದೇಶ: ಅಪಾಯ ಮಟ್ಟ ಮೀರಿದ ಕೃಷ್ಣಾ, ಗೋದಾವರಿ, ನದಿ ಪಾತ್ರದಲ್ಲಿ ಎಚ್ಚರಿಕೆ 

ಪಿಟಿಐ
Published 28 ಆಗಸ್ಟ್ 2025, 11:17 IST
Last Updated 28 ಆಗಸ್ಟ್ 2025, 11:17 IST
   

ಅಮರವತಿ: ಆಂಧ್ರದ ಪ್ರಮುಖ ನದಿಗಳಾದ ಕೃಷ್ಣ ಹಾಗೂ ಗೋದವಾರಿ ನದಿಗಳ ಒಳಹರಿವು ಹೆಚ್ಚಳವಾದ ಪರಿಣಾಮ ಎರಡೂ ದಿನಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿವಿಧ ಭಾಗಗಳಲ್ಲಿ ಅಧಿಕ ಮಳೆ ಸುರಿಯುತ್ತಿದೆ. ಅಧಿಕ ಮಳೆಯಿಂದಾಗಿ ವಿಜಯವಾಡದ ಕೃಷ್ಣಾ ನದಿಯ ಪ್ರಕಾಶಂ ಬ್ಯಾರೇಜ್‌ಗೆ 4.05 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಪೂರ್ವ ಗೋದಾವರಿ ಜಿಲ್ಲೆಯ ದೌಲೇಶ್ವರಂನಲ್ಲಿರುವ ಸರ್ ಆರ್ಥರ್ ಕಾಟನ್ ಬ್ಯಾರೇಜ್‌ಗೆ 5.31 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಪಿಎಸ್‌ಡಿಎಂಎ) ಹೇಳಿದೆ. 

ಎರಡು ನದಿಗಳಲ್ಲಿ ಪ್ರವಾಹದ ನೀರು ಅಪಾಯವನ್ನು ಮಟ್ಟವನ್ನು ಮೀರಿದೆ. ಇದರಿಂದಾಗಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಎಪಿಎಸ್‌ಡಿಎಂಎ ನಿರ್ದೇಶಕ ಪ್ರಖರ್ ಜೈನ್ ಅಧಿಕೃತವಾಗಿ ಹೇಳೀದ್ದಾರೆ. 

ADVERTISEMENT

ಗೋದಾವರಿ ನದಿಯಲ್ಲಿ ಪ್ರವಾಹದ ನೀರಿನ ನಿಧನವಾಗಿ ಏರಿಕೆಯಾಗುತ್ತಿದೆ. ತೆಲಂಗಾಣದ ಭದ್ರಾಚಲಂನಲ್ಲಿ ನೀರಿನ ಮಟ್ಟ 37.7 ಅಡಿಗಳಷ್ಟಿದೆ. ಕುನವರಂನಲ್ಲಿ 15.78 ಮೀಟರ್ ಮತ್ತು ಪೋಲವರಂನಲ್ಲಿ 10.16 ಮೀಟರ್‌ಗಳಷ್ಟಿದೆ. ನದಿಯ ನದಿ ಪಾತ್ರದ ಗ್ರಾಮಗಳಿಗೆ ಮೊದಲ ಹಂತದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.