ADVERTISEMENT

ತಾಂಡವ್‌ ವೆಬ್‌ ಸರಣಿಯ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 11:00 IST
Last Updated 19 ಜನವರಿ 2021, 11:00 IST
ಮುಂಬೈನಲ್ಲಿ ‘ತಾಂಡವ್‌’ ವೆಬ್‌ ಸರಣಿಯ ವಿರುದ್ಧ ಸೋಮವಾರ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು   –ಪಿಟಿಐ ಚಿತ್ರ
ಮುಂಬೈನಲ್ಲಿ ‘ತಾಂಡವ್‌’ ವೆಬ್‌ ಸರಣಿಯ ವಿರುದ್ಧ ಸೋಮವಾರ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು   –ಪಿಟಿಐ ಚಿತ್ರ   

ನೊಯಿಡಾ(ಉತ್ತರಪ್ರದೇಶ): ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿರುವ ‘ತಾಂಡವ್‌’ ಹೆಸರಿನ ವೆಬ್‌ ಸರಣಿ ಚಿತ್ರದ ನಿರ್ಮಾಪಕ ಮತ್ತು ಕಲಾವಿದರ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮೂರನೇ ಎಫ್‌ಐಆರ್‌ ಇದಾಗಿದೆ.

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಪ್ರಕರಣ ದಾಖಲಿಸಲಾಗಿದೆ. ಹಿಂದೂ ದೇವತೆ ಮತ್ತು ಪ್ರಧಾನಿ ಪಾತ್ರವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ADVERTISEMENT

‘ತಾಂಡವ್‌’ ವೆಬ್‌ ಸರಣಿಯ ನಿರ್ದೇಶಕ ಅಲಿ ಅಬ್ಬಾಸ್‌ ಜಫರ್‌, ಇಂಡಿಯಾ ಅಮೆಜಾನ್‌ ಪ್ರೈಂ ವಿಡಿಯೊ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ ಮತ್ತು ನಟ ಸೈಫ್‌ ಅಲಿ ಖಾನ್‌, ಡಿಂಪಲ್‌ ಕಪಾಡಿಯಾ, ಸುನೀಲ್‌ ಗ್ರೋವರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

‘ತಾಂಡವ್‌’ ಸರಣಿಯಲ್ಲಿ ದಲಿತರಿಗೆ ಅವಮಾನ, ಜಾತಿವಾದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ರಂಬಾಪುರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.