ADVERTISEMENT

ಆನ್‌ಲೈನ್ ಜೂಜಾಟ ನಿಷೇಧಕ್ಕೆ ಆಂಧ್ರ ಸರ್ಕಾರ ನಿರ್ಧಾರ

ಜೂಜಾಟ ಆಯೋಜಕರಿಗೆ, ಆಡುವವರಿಗೂ ಜೈಲು ಶಿಕ್ಷೆ

ಪಿಟಿಐ
Published 3 ಸೆಪ್ಟೆಂಬರ್ 2020, 18:33 IST
Last Updated 3 ಸೆಪ್ಟೆಂಬರ್ 2020, 18:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮರಾವತಿ: ರಮ್ಮಿ ಮತ್ತು ಪೋಕರ್‌ನಂತಹ ಆನ್‌ಲೈನ್ ಜೂಜಾಟಗಳನ್ನು ನಿಷೇಧಿಸಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ವೈ.ಎಸ್‌.ಜಗಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಆನ್‌ಲೈನ್‌ ಜೂಜುಗಳನ್ನು ನಿಷೇಧಿಸಬೇಕೆಂದು ತೀರ್ಮಾನಿಸಲಾಗಿದೆ ಎಂದು ವಾರ್ತಾ ಸಚಿವ ಪೆರ್ನಿ ವೆಂಟರಾಮಯ್ಯ(ನಾಣಿ) ಸುದ್ದಿಗಾರರಿಗೆ ತಿಳಿಸಿದರು.

ಸಚಿವ ಸಂಪುಟದ ತೀರ್ಮಾನಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನಿಡಿದ ಅವರು, ಆನ್‌ಲೈನ್ ಜೂಜುಗಳು ಯುವಕರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಯುವಕರನ್ನು ರಕ್ಷಿಸುವುದಕ್ಕಾಗಿ ಎಲ್ಲ ರೀತಿಯ ಆನ್‌ಲೈನ್ ಜೂಜಾಟಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ADVERTISEMENT

ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದ ಪ್ರಕಾರ, ‘ಆನ್‌ಲೈನ್ ಜೂಜುಗಳನ್ನು ಆಯೋಜಿಸುವವರಿಗೆ ಮೊದಲ ಬಾರಿಗೆ ಒಂದು ವರ್ಷ ಜೈಲು ಜತೆಗೆ ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಬಾರಿಗೆ ಇದೇ ಅಪರಾಧ ಮುಂದುವರಿದರೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆನ್‌ಲೈನ್ ಜೂಜಾಟ ಆಡುವವರು ಸಿಕ್ಕಿಬಿದ್ದರೆ, ಅವರಿಗೂ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತಿದೆ‘ ಎಂದು ವೆಂಕಟರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.