ADVERTISEMENT

ಶ್ರೀಶೈಲ ದೇವಸ್ಥಾನಕ್ಕೆ 4,700 ಎಕರೆ ಅರಣ್ಯ ಭೂಮಿ: ಆಂಧ್ರ ಸಚಿವ 

ಪಿಟಿಐ
Published 25 ಫೆಬ್ರುವರಿ 2023, 16:29 IST
Last Updated 25 ಫೆಬ್ರುವರಿ 2023, 16:29 IST
   

ಅಮರಾವತಿ: ‘ಶ್ರೀಶೈಲ ದೇವಸ್ಥಾನಕ್ಕೆ 4,700 ಎಕರೆ ವಿವಾದಿತ ಅರಣ್ಯ ಭೂಮಿ ಮಂಜೂರು ಮಾಡುವ ವಿಚಾರದಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಆಂಧ್ರಪ್ರದೇಶದ ಮುಜರಾಯಿ ಸಚಿವ ಕೊಟ್ಟು ಸತ್ಯನಾರಾಯಣ ಅವರು ಶನಿವಾರ ತಿಳಿಸಿದ್ದಾರೆ.

‘ದೇವಸ್ಥಾನದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಹಾಗೂ ಕಂದಾಯ ಸಚಿವರು ಭೂ ವ್ಯಾಜ್ಯದ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಭೂಮಿಯ ಗಡಿ ಗುರುತಿಸುವಿಕೆ ಕಾರ್ಯ ನಡೆದಿದೆ. ಈಗಾಗಲೇ ಬಸ್‌ ನಿಲ್ದಾಣ ಸ್ಥಾಪನೆಗೆ ನಾಲ್ಕು ಎಕರೆ ಭೂಮಿ ಮಂಜೂರು ಮಾಡಲಾಗಿದೆ’ ಎಂದಿದ್ದಾರೆ.

‘ದೇವಸ್ಥಾನಕ್ಕೆ ಭೂಮಿ ಮಂಜೂರು ಮಾಡುವುದರಿಂದ ನಿರೀಕ್ಷಿಸಿದಷ್ಟು ಆದಾಯ ದೊರೆಯುವುದಿಲ್ಲ. ಇದಕ್ಕಾಗಿ ಹೊಸ ನೀತಿಯೊಂದನ್ನು ಜಾರಿಗೊಳಿಸುವ ಅಗತ್ಯವಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.