ADVERTISEMENT

ಜಮ್ಮು: ಗುಂಡು ಹಾರಿಸಿಕೊಂಡು ಕರ್ನಾಟಕ ಮೂಲದ ಯೋಧ ಆತ್ಮಹತ್ಯೆ

ಪಿಟಿಐ
Published 27 ಏಪ್ರಿಲ್ 2021, 6:23 IST
Last Updated 27 ಏಪ್ರಿಲ್ 2021, 6:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬನಿಹಾಲ್‌/ಜಮ್ಮು: ‘ಜಮ್ಮು ಮತ್ತು ಕಾಶ್ಮೀರದ ರಾಮಬನ್ ಜಿಲ್ಲೆಯ ಸೇನಾ ಶಿಬಿರದಲ್ಲಿ ಕರ್ನಾಟಕ ಮೂಲದ ಯೋಧರೊಬ್ಬರು ತನ್ನ ಸರ್ವೀಸ್‌ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಂಗಳವಾರ ನಸುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಯೋಧನನ್ನು ಕರ್ನಾಟಕದ ಅಸಂಗೆಪ್ಪ ಮಾದರ (28) ಎಂದು ಗುರುತಿಸಲಾಗಿದೆ. ಅವರನ್ನು ಬನಿಹಾಲ್‌ನ ಆರ್‌–ಸೆಂಟರ್‌ ಕ್ಯಾಂಪ್‌ನಲ್ಲಿ ನಿಯೋಜಿಸಲಾಗಿತ್ತು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.