ADVERTISEMENT

ಸಿಕ್ಕಿಂ: ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರಿಗೆ ಸೇನೆ ನೆರವು

ಪಿಟಿಐ
Published 19 ಫೆಬ್ರುವರಿ 2021, 6:54 IST
Last Updated 19 ಫೆಬ್ರುವರಿ 2021, 6:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗ್ಯಾಂಗ್ಟಕ್‌: ಪೂರ್ವ ಸಿಕ್ಕಿಂನಲ್ಲಿ ದಿಢೀರನೆ ಉಂಟಾದ ಭಾರಿ ಹಿಮಪಾತದಿಂದಾಗಿ ರಸ್ತೆಯಲ್ಲಿ ಸಿಲುಕಿದ್ದ 400ಕ್ಕೂ ಹೆಚ್ಚು ಪ್ರವಾಸಿಗರಿಗೆ ಭಾರತೀಯ ಸೇನಾಪಡೆ ಯೋಧರು ಆಹಾರ, ಬೆಚ್ಚಗಿನ ಉಡುಪು ಪೂರೈಸುವ ಜತೆಗೆ, ವೈದ್ಯಕೀಯ ಸೇವೆಯನ್ನು ಕಲ್ಪಿಸಿದ್ದಾರೆ.

ಗ್ಯಾಂಗ್ಟಕ್‌ನಿಂದ 40 ಕಿ.ಮೀ ದೂರದಲ್ಲಿರುವ ಜೆಎನ್‌ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಭಾರಿ ಹಿಮಪಾತವಾಗಿ, ರಸ್ತೆ ಬಂದ್ ಆಯಿತು. ತ್ಸೊಮೊಗೊ ಸರೋವರ್, ನಾಥುಲಾ ಪಾಸ್, ಬಾಬಾ ಮಂದಿರ್, ಮೆಮಂಚೊ ಸರೋವರ ಮತ್ತು ಕುಪುಪ್‌ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವಾಪಸ್ ಆಗುತ್ತಿದ್ದ 447ಕ್ಕೂ ಹೆಚ್ಚು ಪ್ರಯಾಣಿಕರಿದ್ದ 150 ವಾಹನಗಳು ಈ ದಾರಿಯಲ್ಲಿ ಸಿಲುಕಿದವು.

ಈ ಪ್ರವಾಸಿಗರಲ್ಲಿ ಹಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಅಂಥವರನ್ನು ಗುರುತಿಸಿ, ಸೇನಾ ಯೋಧರು, 317 ಎಫ್‌ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು. ಉಳಿದ ಪ್ರವಾಸಿಗರಿಗೆ ಬಿಸಿ ಬಿಸಿ ಆಹಾರದ ಜತೆಗೆ, ಬೆಚ್ಚಗಿನ ಉಡುಪುಗಳನ್ನು ಪೂರೈಸಿ, ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಿದರು.

ADVERTISEMENT

ವಾತಾವರಣ ತಿಳಿಯಾದ ನಂತರ ನಿರ್ಬಂಧಿತ ರಸ್ತೆಗಳನ್ನು ತೆರವುಗೊಳಿಸಿ, ಅವರೆಲ್ಲರನ್ನೂ ಗ್ಯಾಂಗ್ಟಕ್‌ಗೆ ಕಳುಹಿಸಲಾಯಿತು ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.