ADVERTISEMENT

ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ದಡದಲ್ಲಿ ಶಿವಾಜಿ ಪ್ರತಿಮೆ ಅನಾವರಣ: ಸೇನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2024, 16:14 IST
Last Updated 28 ಡಿಸೆಂಬರ್ 2024, 16:14 IST
<div class="paragraphs"><p>ಪಾಂಗಾಂಗ್‌ ಸರೋವರದ ದಡದಲ್ಲಿ ಸ್ಥಾಪಿಸಿರುವ ಛತ್ರಪತಿ ಶಿವಾಜಿ&nbsp;ಪ್ರತಿಮೆ ಎದುರು ಯೋಧರು</p></div>

ಪಾಂಗಾಂಗ್‌ ಸರೋವರದ ದಡದಲ್ಲಿ ಸ್ಥಾಪಿಸಿರುವ ಛತ್ರಪತಿ ಶಿವಾಜಿ ಪ್ರತಿಮೆ ಎದುರು ಯೋಧರು

   

ಚಿತ್ರಕೃಪೆ: X / @firefurycorps

ನವದೆಹಲಿ: ಪೂರ್ವ ಲಡಾಖ್‌ ವಲಯದಲ್ಲಿ ಚೀನಾದೊಂದಿಗೆ ಹಂಚಿಕೆಯಾಗಿರುವ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪದಲ್ಲಿರುವ ಪಾಂಗಾಂಗ್‌ ಸರೋವರದ ದಡದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಯನ್ನು ಭಾರತೀಯ ಸೇನೆ ಅನಾವರಣಗೊಳಿಸಿದೆ.

ADVERTISEMENT

'ಫೈರ್‌ ಅಂಡ್‌ ಫ್ಯೂರಿ ಕಾರ್ಪ್ಸ್‌' ಎಂದೇ ಹೆಸರುವಾಸಿಯಾದ ಲೇಹ್‌ ನೆಲೆಯ '14 ಕಾರ್ಪ್ಸ್‌' ಈ ಮಾಹಿತಿಯನ್ನು ಎಕ್ಸ್‌/ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಪ್ರತಿಮೆಯನ್ನು ಸಮುದ್ರ ಮಟ್ಟದಿಂದ 14,300 ಅಡಿ ಎತ್ತರದಲ್ಲಿ ಸ್ಥಾಪಿಸಲಾಗಿದೆ. ಶೌರ್ಯ, ದೂರದೃಷ್ಟಿ ಹಾಗೂ ಅಚಲ ನ್ಯಾಯದ ಸಂಕೇತವಾಗಿರುವ ಶಿವಾಜಿಯ ಮೂರ್ತಿಯನ್ನು ಲೆಫ್ಟಿನೆಂಟ್‌ ಜನರಲ್‌ ಹಿತೇಶ್‌ ಭಲ್ಲಾ ಅವರು ಗುರುವಾರ ಅನಾವರಣಗೊಳಿಸಿದ್ದಾರೆ ಎಂದು ತಿಳಿಸಿದೆ.

ತಲೆಮಾರುಗಳಿಗೆ ಸ್ಫೂರ್ತಿಯ ಸೆಲೆಯಾಗಿ ಉಳಿದಿರುವ ಭಾರತೀಯ ಆಡಳಿತಗಾರನ ಅಚಲ ಸ್ಥೈರ್ಯವನ್ನು ಈ ಕಾರ್ಯಕ್ರಮವು ಆಚರಿಸುತ್ತದೆ ಎಂದೂ ಹೇಳಿದೆ.

ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ನಿಯೋಜಿಸಿದ್ದ ಸೇನಾ ಪಡೆಗಳನ್ನು ಭಾರತ ಮತ್ತು ಚೀನಾ ಇದೇ ವರ್ಷ ಅಕ್ಟೋಬರ್‌ನಲ್ಲಿ ವಾಪಸ್‌ ಕರೆಸಿಕೊಂಡಿದ್ದವು. ಈ ಪ್ರಕ್ರಿಯೆ ಪೂರ್ಣಗೊಂಡ ಕೆಲವೇ ವಾರಗಳಲ್ಲಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.