ADVERTISEMENT

ಯುದ್ಧ ಭೂಮಿ ಕಣ್ಗಾವಲು ವ್ಯವಸ್ಥೆಗೆ ಸೇನೆ ಸಿದ್ಧತೆ

ಪಿಟಿಐ
Published 6 ಮೇ 2023, 16:24 IST
Last Updated 6 ಮೇ 2023, 16:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಭದ್ರತಾ ಪಡೆಗಳ ಕಮಾಂಡರ್‌ಗಳು ಹಾಗೂ ಎಲ್ಲಾ ಹಂತಗಳ ಸಿಬ್ಬಂದಿಗೆ ಕಾರ್ಯಾಚರಣೆಯ ಕುರಿತಾದ ಸಮಗ್ರ ಚಿತ್ರಣ ಒದಗಿಸುವ ಹಾಗೂ ಅದರ ಆಧಾರದಲ್ಲಿ ಅವರು ತ್ವರಿತವಾಗಿ ನಿರ್ಧಾರ ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಸೇನೆಯು ಯುದ್ಧ ಭೂಮಿ ಕಣ್ಗಾವಲು ವ್ಯವಸ್ಥೆ ರೂಪಿಸಲು ಮುಂದಾಗಿದೆ’ ಎಂದು ರಕ್ಷಣಾ ಇಲಾಖೆಯ ಮೂಲಗಳು ಶನಿವಾರ ತಿಳಿಸಿವೆ.

‘ಪ್ರಾಜೆಕ್ಟ್‌ ಸಂಜಯ್‌’ ಅಡಿಯಲ್ಲಿ ಈ ವ್ಯವಸ್ಥೆ ರೂಪಿಸಲಾಗುತ್ತದೆ. ಇದಕ್ಕಾಗಿ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯ ಸೆನ್ಸಾರ್‌ಗಳನ್ನು ಸ್ಥಾಪಿಸಬೇಕಾಗಿದ್ದು, ಇವುಗಳಿಂದ ಸಿಗುವ ಮಾಹಿತಿಗಳನ್ನು ಕ್ರೋಡೀಕರಿಸುವುದಕ್ಕೆ ಅಸಂಖ್ಯ ಕಣ್ಗಾವಲು ಕೇಂದ್ರಗಳನ್ನು ನಿರ್ಮಿಸುವುದು ಅಗತ್ಯವಾಗಿದೆ. ‌

‘ಸೇನೆಯು ಕಳೆದ ವರ್ಷದ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೂ ಬಯಲು ಸೀಮೆ, ಮರಳುಗಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಈ ಸಂಬಂಧ ಪ್ರಯೋಗಗಳನ್ನು ನಡೆಸಿದೆ. 2023ನ್ನು ‘ರೂಪಾಂತರದ ವರ್ಷ’ ಎಂದು ಪರಿಗಣಿಸಿದೆ’ ಎಂದು ಮೂಲಗಳು ಹೇಳಿವೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.