ನವದೆಹಲಿ: ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ಸುಮಾರು 20 ಸಿಬ್ಬಂದಿಗೆ ಕೋವಿಡ್ -19 ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಅವರೆಲ್ಲರೂ ಲಕ್ಷಣ ರಹಿತರಾಗಿದ್ದಾರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂಲಕ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,004ಕ್ಕೆ ಏರಿಕೆಯಾಗಿದೆ.
ಈ ಕುರಿತು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ದೇಶದ ಇತರೆ ಜನರಂತೆಯೇ ಕೋವಿಡ್-19 ವಿರುದ್ಧದ ಹೋರಾಟವನ್ನು ಡಿಎಂಆರ್‌ಸಿ ಕೂಡ ನಡೆಸುತ್ತಿದೆ. ಮೆಟ್ರೋ ರೈಲು ಸಂಚಾರವನ್ನು ಪುನರಾರಂಭಗೊಳಿಸಲು ಸಿದ್ಧವಾಗಿದ್ದು, ಎಲ್ಲ ನೌಕರರು ತಮ್ಮ ಕರ್ತವ್ಯಕ್ಕೆ ಮರಳಿ ಎಲ್ಲ ಸಿದ್ದತೆಗಳನ್ನು ಮಾಡುವ ಇವರ ನಡೆ ಅನುಕರಣೀಯವಾಗಿದೆ ಎಂದು ಹೇಳಿದ್ದಾರೆ.
ಎನ್‌ಸಿಆರ್‌ನಾದ್ಯಂತ ಇರುವ ಕೆಲವು ಉದ್ಯೋಗಿಗಳು ದುರದೃಷ್ಟವಶಾತ್ ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ. ಅವರೆಲ್ಲರೂ ಸುರಕ್ಷಿತ ಮತ್ತು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಬಿಕ್ಕಟ್ಟಿನ ವೇಳೆಯಲ್ಲಿಯೂ ಡಿಎಂಆರ್‌ಸಿ ಸಿಬ್ಬಂದಿಗಳಲ್ಲಿ ಮೆಟ್ರೋ ಸೇವೆ ಆರಂಭಿಸುವ ಉತ್ಸಾಹ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಡಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಡಾ. ಮಂಗೂ ಸಿಂಗ್ ಮಾತನಾಡಿ, ಎಲ್ಲಾ ಉದ್ಯೋಗಿಗಳು ಅಂತರವನ್ನು ಕಾಪಾಡಿಕೊಳ್ಳುವ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ ಮತ್ತು ವೈರಸ್ ಪೀಡಿತರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.
ಮುಂದಿನ ದಿನಗಳಲ್ಲಿ ನಾವು ನಮ್ಮ ಸೇವೆಗಳನ್ನು ಪುನರಾರಂಭಿಸಿದಾಗಲೆಲ್ಲಾ ದೆಹಲಿ ಮೆಟ್ರೊಗೆ ಈ ಅದಮ್ಯ ಉತ್ಸಾಹ ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ಡಿಎಂಆರ್‌ಸಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.