ನವದೆಹಲಿ: ಪಕ್ಷದ ಸಂಘಟನಾ ಮುಖ್ಯಸ್ಥರ ಹುದ್ದೆಗಳನ್ನು ಇತ್ತೀಚೆಗಷ್ಟೇ ಬದಲಿಸಿದ್ದ ಬಿಜೆಪಿ, ರಾಜ್ಯಗಳ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ನೇಮಕ ಮಾಡಿ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದೆ.
ಪಕ್ಷದ ಹಿರಿಯ ಮುಖಂಡ ಅರುಣ ಸಿಂಗ್ ಅವರಿಗೆ ಕರ್ನಾಟಕದ ಜವಾಬ್ದಾರಿ ವಹಿಸಲಾಗಿದ್ದು, ಡಿ.ಕೆ. ಅರುಣಾ ಅವರನ್ನು ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗಷ್ಟೇ ನೇಮಕಗೊಂಡು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪಕ್ಷದ ರಾಜ್ಯ ಮುಖಂಡ ಸಿ.ಟಿ. ರವಿ ಅವರಿಗೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ವಹಿಸಲಾಗಿದೆ.
ರಾಜ್ಯದ ಇನ್ನೊಬ್ಬ ಮುಖಂಡ ನಿರ್ಮಲಕುಮಾರ್ ಸುರಾನಾ ಅವರನ್ನು ನೆರೆಯ ಪುದುಚೇರಿಗೆ ನಿಯೋಜಿಸಲಾಗಿದೆ.
ಇದುವರೆಗೆ ರಾಜ್ಯದ ಉಸ್ತುವಾರಿಯಾಗಿದ್ದ ಪಿ.ಮುರುಳೀಧರ ರಾವ್ ಅವರಿಗೆ ಮಧ್ಯಪ್ರದೇಶದ ಹೊಣೆ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.