ADVERTISEMENT

ಅರುಣಾಚಲ ಪ್ರದೇಶ: ಮೊದಲ ದೊಡ್ಡ ವಿಮಾನ ನಿಲ್ದಾಣ ಸಿದ್ಧ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 15:47 IST
Last Updated 17 ಸೆಪ್ಟೆಂಬರ್ 2022, 15:47 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಗುವಾಹಟಿ: ಅರುಣಾಚಲಪ್ರದೇಶದಲ್ಲಿ ಮೂಲಸೌಕರ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡುವ ಭಾಗವಾಗಿ, ದೊಡ್ಡ ಪ್ರಯಾಣಿಕ ವಿಮಾನಗಳನ್ನು ಇಳಿಸುವ ಸಾಮರ್ಥ್ಯವನ್ನು ಹೊಂದಿರುವ ಮೊದಲ ದೊಡ್ಡ ವಿಮಾನ ನಿಲ್ದಾಣವು ಕಾರ್ಯಾಚರಣೆಗೆ ಸಿದ್ಧವಾಗಿದೆ.

ಸೆ.7ರಿಂದ ವಿಮಾನಗಳ ಹಾರಾಟ ಆರಂಭಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಏರೋಡ್ರಮ್ ಪರವಾನಗಿಯನ್ನು ನೀಡಿದೆ. ರಾಜಧಾನಿ ಇಟಾನಗರಕ್ಕೆ ಹತ್ತಿರುವ ಈ ವಿಮಾನನಿಲ್ದಾಣಕ್ಕೆ ದೊನಿ ಪೊಲೊ ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ.

‘ನೂತನ ವಿಮಾನನಿಲ್ದಾಣವು ರಾಷ್ಟ್ರಕ್ಕೆ ಅರ್ಪಣೆಯಾಗಲು ಸಿದ್ಧವಾಗಿದೆ. ಈ ವಿಮಾನನಿಲ್ದಾಣವನ್ನು ಆರಂಭಿಸುವ ಮೂಲಕ ಅರುಣಾಚಲ ಪ್ರದೇಶವು ನೇರವಾಗಿ ದೆಹಲಿಗೆ ಸಂಪರ್ಕ ಕಲ್ಪಿಸಲಿದೆ. ನಮ್ಮ ರಾಜ್ಯದ ಜನರ ದೀರ್ಘಕಾಲದ ಕನಸೊಂದು ಈಗ ನನಸಾಗಿದೆ’ ಎಂದು ಅರುಣಾಚಲಪ್ರದೇಶದ ಮುಖ್ಯಮಂತ್ರಿ ‍ಪೆಮಾ ಖಂಡು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಖಂಡು, ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ 600 ಎಂ.ವಿ. ಕಮೆಂಗ್ ಹೈಡ್ರೊ ಎಲೆಕ್ಟ್ರಿಕ್ ಯೋಜನೆ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದಾರೆ.

‘ನಮ್ಮ ಆಹ್ವಾನವನ್ನು ಪ್ರಧಾನಿ ಒಪ್ಪಿಕೊಂಡಿದ್ದು, ಶೀಘ್ರವೇ ಭೇಟಿಯ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ’ ಎಂದು ಖಂಡು ಹೇಳಿದ್ದಾರೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಸುಮಾರು ₹ 645 ಕೋಟಿ ವೆಚ್ಚದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.