ADVERTISEMENT

ರೈತರನ್ನು ಬೆಂಬಲಿಸಿ ಕೇಜ್ರಿವಾಲ್ ಒಂದು ದಿನದ ಉಪವಾಸ: ಎಎಪಿ ಕಾರ್ಯಕರ್ತರಿಗೂ ಆಗ್ರಹ

ಏಜೆನ್ಸೀಸ್
Published 13 ಡಿಸೆಂಬರ್ 2020, 12:16 IST
Last Updated 13 ಡಿಸೆಂಬರ್ 2020, 12:16 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌    

ನವದೆಹಲಿ: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಒಂದು ದಿನದ ಉಪವಾಸ ಕೈಗೊಳ್ಳುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಭಾನುವಾರ ಘೋಷಿಸಿದ್ದಾರೆ.

ರೈತರಿಗೆ ಬೆಂಬಲ ಸೂಚಿಸಿ, ಸೋಮವಾರ ಒಂದು ದಿನದ ಉಪವಾಸ ಮಾಡುವಂತೆ ಎಎಪಿ ಕಾರ್ಯಕರ್ತರು, ಬೆಂಬಲಿಗರು ಹಾಗೂ ಸಾರ್ವಜನಿಕರಿಗೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆಗ್ರಹಿಸಿದ್ದಾರೆ.

'ರೈತರು ದೇಶದ್ರೋಹಿಗಳು ಎಂದು ಕೇಂದ್ರ ಸರ್ಕಾರದ ಸಚಿವರು ಹಾಗೂ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಹಲವು ನಿವೃತ್ತ ಯೋಧರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರು, ಗಾಯಕರು, ಗಣ್ಯರು, ವೈದ್ಯರು ಹಾಗೂ ವ್ಯಾಪಾರಿಗಳು ರೈತರಿಗೆ ಬೆಂಬಲ ನೀಡಿದ್ದಾರೆ. ಆ ಎಲ್ಲರೂ ದೇಶದ್ರೋಹಿಗಳೇ ಎಂದು ಬಿಜೆಪಿಯನ್ನು ಕೇಳಬೇಕಿದೆ' ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.