ADVERTISEMENT

ಪತ್ನಿ, ಆಪ್ತ ಕಾರ್ಯದರ್ಶಿಯನ್ನು ಜೈಲಿನಲ್ಲಿ ಭೇಟಿಯಾದ ಅರವಿಂದ ಕೇಜ್ರಿವಾಲ್

ಪಿಟಿಐ
Published 9 ಏಪ್ರಿಲ್ 2024, 16:00 IST
Last Updated 9 ಏಪ್ರಿಲ್ 2024, 16:00 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

(ಪಿಟಿಐ ಚಿತ್ರ)

ನವದೆಹಲಿ: ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಪತ್ನಿ ಸುನಿತಾ ಕೇಜ್ರಿವಾಲ್ ಹಾಗೂ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್‌ ಅವರನ್ನು ಮಂಗಳವಾರ ಭೇಟಿ ಮಾಡಿದರು.

ADVERTISEMENT

ಜೈಲು ನಿಯಮಗಳ ಪ್ರಕಾರ ಕೈದಿಯೊಬ್ಬ ವಾರಕ್ಕೆ ಎರಡು ಬಾರಿ ತಾನು ಹೆಸರು ನೀಡಿದ ವ್ಯಕ್ತಿಗಳನ್ನು ಮುಖಾಮುಖಿಯಾಗಿ ಅಥವಾ ವಿಡಿಯೊ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಬಹುದು. ಏ.1ರಂದು ಇ.ಡಿ ರಿಮಾಂಡ್‌ಗೆ ವಹಿಸಿದ ಬಳಿಕ ಕೇಜ್ರಿವಾಲ್ ಅವರ ಮೊದಲ ಮುಖಾಮುಖಿ ಭೇಟಿ ಇದಾಗಿದೆ.

ಅರ್ಧ ಗಂಟೆ ಭೇಟಿ ಮಾಡಲು ಜೈಲು ಅಧಿಕಾರಿ ಅವಕಾಶ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಕೈದಿ ಹಾಗೂ ಸಂದರ್ಶಕರ ನಡುವೆ ಕಬ್ಬಿಣದ ಮೆಶ್ ಇರುವ ’ಮುಲಾಖಾತ್ ಜಂಗ್ಲಾ’ ವ್ಯವಸ್ಥೆಯಡಿ ಭೇಟಿ ನಡೆಯಿತು. ಈವರೆಗೂ ಕುಟುಂಬ ಸದಸ್ಯರು ವಿಡಿಯೊ ಕಾನ್ಫರೆನ್ಸ್ ಮೂಲಕ ಕೇಜ್ರಿವಾಲ್ ಅವರನ್ನು ಮಾತನಾಡಿಸುತ್ತಿದ್ದರು.

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಇ.ಡಿಯಿಂದ ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್, ತಮ್ಮನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ಇಂದು ಕೋರ್ಟ್‌ ತಿರಸ್ಕರಿಸಿತ್ತು.

ಜೈಲು ಸಂಖ್ಯೆ ಎರಡಲ್ಲಿ ಕೇಜ್ರಿವಾಲ್ ಅವರನ್ನು ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.