ADVERTISEMENT

ಕುತುಬ್ ಮಿನಾರ್ ಪೂಜಾ ಸ್ಥಳವಲ್ಲ: ಎಎಸ್‌ಐ ಪ್ರತಿಪಾದನೆ

ಪಿಟಿಐ
Published 24 ಮೇ 2022, 12:08 IST
Last Updated 24 ಮೇ 2022, 12:08 IST
.
.   

ನವದೆಹಲಿ: ‘ಕುತುಬ್ ಮಿನಾರ್ ಸಂಕೀರ್ಣವುಪೂಜಾ ಸ್ಥಳವಲ್ಲ ಮತ್ತು ಸ್ಮಾರಕದ ಈಗಿನ ಸ್ಥಿತಿಯನ್ನು ಬದಲಾಯಿಸಲು ಆಗುವುದಿಲ್ಲ’ ಎಂದುಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.

ಕುತುಬ್ ಮಿನಾರ್ ಸಂಕೀರ್ಣದ ಒಳಗೆ ಹಿಂದೂ ಮತ್ತು ಜೈನ ದೇವರುಗಳನ್ನು ಮರುಸ್ಥಾಪಿಸಲು ಕೋರಿ ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಎಎಸ್‌ಐ ವಿರೋಧ ವ್ಯಕ್ತಪಡಿಸಿದೆ.

‘ಸಂಕೀರ್ಣದ ಜಾಗದ ಈಗಿನ ಸ್ಥಿತಿಯನ್ನು ಬದಲಿಸುವ ಮೂಲಕ ಅರ್ಜಿದಾರರು ಮೂಲಭೂತ ಹಕ್ಕನ್ನು ಪಡೆಯಲಾಗದು’ ಎಂದು ಎಎಸ್‌ಐ ಪ್ರತಿಪಾದಿಸಿದೆ. ಎಎಸ್‌ಐ ವಾದವನ್ನು ಗಮನಿಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನಿಖಿಲ್‌ ಚೋಪ್ರಾ ಅವರು, ಅರ್ಜಿಯ ಆದೇಶವನ್ನು ಜೂನ್ 9ರವರೆಗೆ ಕಾಯ್ದಿರಿಸಿದರು.

ADVERTISEMENT

ಮಹಮ್ಮದ್‌ ಘೋರಿಯ ಆಡಳಿತ ಅವಧಿಯಲ್ಲಿ ಸೇನಾ ನಾಯಕನಾಗಿದ್ದ ಕುತುಬುದ್ದೀನ್‌ ಐಬಕ್‌, 27 ದೇವಾಲಯಗಳನ್ನು ಭಾಗಶಃ ಧ್ವಂಸ ಮಾಡಿದ್ದನು. ಅಲ್ಲದೆ ಆ ಸಾಮಗ್ರಿಗಳನ್ನು ಮರುಬಳಕೆ ಮಾಡಿಕೊಂಡು ಕುವ್ವತ್‌ ಉಲ್‌ ಇಸ್ಲಾಂ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ವಕೀಲ ಹರಿಶಂಕರ್‌ ಜೈನ್‌ ಪ್ರತಿಪಾದಿಸಿ ಅರ್ಜಿ ಸಲ್ಲಿಸಿದ್ದಾರೆ.

ಅನಾದಿ ಕಾಲದಿಂದಲೂ ಈ ಆವರಣದಲ್ಲಿ ಎರಡು ಗಣೇಶನ ವಿಗ್ರಹಗಳು ನೆಲೆಗೊಂಡಿವೆ. ಅವುಗಳನ್ನು ಎಎಸ್‌ಐ ರಾಷ್ಟ್ರೀಯ ವಸ್ತುಸಂಗ್ರಹಾಲಯವೊಂದಕ್ಕೆ ಸಾಗಿಸುವ ಸಾಧ್ಯತೆಗಳಿವೆ ಎಂದು ಅವರು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.