ADVERTISEMENT

ವಿಶಾಖಪಟ್ಟಣ: ಎರಡು ಏಷಿಯಾಟಿಕ್ ಸಿಂಹದ ಮರಿಗಳು ಜನನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 14:52 IST
Last Updated 30 ಸೆಪ್ಟೆಂಬರ್ 2025, 14:52 IST
   

ವಿಶಾಖಪಟ್ಟಣ: ಇಲ್ಲಿನ ಇಂದಿರಾ ಗಾಂಧಿ ವನ್ಯಜೀವಿಧಾಮದಲ್ಲಿ Indira Gandhi Zoological Park (IGZP) ಎರಡು ಏಷಿಯಾಟಿಕ್ ಸಿಂಹದ ಮರಿಗಳು ಜನಿಸಿವೆ ಎಂದು ಪಾರ್ಕ್ ತಿಳಿಸಿದೆ.

ತಾಯಿ ಸಿಂಹ ಮತ್ತು ಮರಿಗಳು ಆರೋಗ್ಯವಾಗಿದ್ದು, ಮರಿಗಳನ್ನು ತೀವ್ರ ನಿಗಾದಲ್ಲಿರಿಸಲಾಗಿದೆ ಎಂದು ಪಾರ್ಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಷ್ಯಾಟಿಕ್ ಸಿಂಹಗಳನ್ನು (ಪ್ಯಾಂಥೆರಾ ಲಿಯೋ ಪರ್ಸಿಕಾ) ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಮತ್ತು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಪಟ್ಟಿ ಮಾಡಲಾಗಿದೆ.

ADVERTISEMENT

ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಸಿಂಹಗಳು ಇಂದು ಗುಜರಾತ್‌ನ ಗಿರ್ ಅರಣ್ಯದಲ್ಲಿ ಮಾತ್ರ ಕಾಣಸಿಗುತ್ತವೆ.

ಇಂದಿರಾ ಗಾಂಧಿ ವನ್ಯಜೀವಿಧಾಮದಲ್ಲಿ ಸಾಕಷ್ಟು ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿರುವುದು ಏಷಿಯಾಟಿಕ್ ಸಿಂಹದಂತಹ ಅಪರೂಪದ ಪ್ರಾಣಿಗಳಿಗೂ ಆಶ್ರಯ ತಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.