
ಪಿಟಿಐ
ಗುವಾಹಟಿ: ವಿದೇಶಿಯರ ನ್ಯಾಯಮಂಡಳಿಯು ‘ವಿದೇಶಿಯರು’ ಎಂದು ಘೋಷಿಸಿರುವ 15 ಬಾಂಗ್ಲಾದೇಶಿಯರು ಶುಕ್ರವಾರದೊಳಗೆ ಭಾರತ ತೊರೆಯಬೇಕು ಎಂದು ಅಸ್ಸಾಂನ ನಾಗಾಂವ್ ಜಿಲ್ಲಾಡಳಿತ ಗುರುವಾರ ಸೂಚಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ದೇವಶಿಶ್ ಶರ್ಮಾ ಅವರು ಡಿ.17ರಂದು ಆದೇಶ ಹೊರಡಿಸಿದ್ದು, ಆದೇಶದ ಪ್ರತಿಗಳನ್ನು ಬಾಂಗ್ಲಾದೇಶಿಯರಿಗೆ ಗುರುವಾರ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘6 ಜನ ಮಹಿಳೆಯರು ಸೇರಿ 15 ಜನರು ಬಾಂಗ್ಲಾದೇಶದಿಂದ ಬಂದು, ಭಾರತದಲ್ಲಿ ಕಾನೂನುಬಾಹಿರವಾಗಿ ನೆಲಸಿದ್ದಾರೆ’ ಎಂದು ನ್ಯಾಯಮಂಡಳಿ ತನ್ನ ಆದೇಶದಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.