ADVERTISEMENT

ಅಸ್ಸಾಂ | ನವೀಕರಣಕ್ಕೆ 2 ವರ್ಷ; ಸಂಚಾರಕ್ಕೆ ಮುಕ್ತವಾದ ತಿಂಗಳಲ್ಲೇ ಕುಸಿದ ಸೇತುವೆ

ಪಿಟಿಐ
Published 18 ಜೂನ್ 2025, 10:04 IST
Last Updated 18 ಜೂನ್ 2025, 10:04 IST
<div class="paragraphs"><p>ಅಸ್ಸಾಂ | ನವೀಕರಣಕ್ಕೆ 2 ವರ್ಷ; ಸಂಚಾರಕ್ಕೆ ಮುಕ್ತವಾದ ತಿಂಗಳಲ್ಲೇ ಕುಸಿದ ಸೇತುವೆ</p></div>

ಅಸ್ಸಾಂ | ನವೀಕರಣಕ್ಕೆ 2 ವರ್ಷ; ಸಂಚಾರಕ್ಕೆ ಮುಕ್ತವಾದ ತಿಂಗಳಲ್ಲೇ ಕುಸಿದ ಸೇತುವೆ

   

– ಎ.ಐ ಚಿತ್ರ

ಸಿಲ್ಚರ್: ಅಸ್ಸಾಂನ ಖಚ್ಚರ್‌ ಜಿಲ್ಲೆಯಲ್ಲಿ ನವೀಕರಣಗೊಂಡ ಸೇತುವೆಯೊಂದು ಕುಸಿದು ಓವರ್‌ಲೋಡ್ ಆಗಿದ್ದ  ಎರಡು ಲಾರಿಗಳು ಹಾರಂಗ್ ನದಿಗೆ ಬಿದ್ದಿವೆ. ಘಟನೆಯಲ್ಲಿ ಚಾಲಕರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅಸ್ಸಾಂ ಹಾಗೂ ಮೇಘಾಲಯವನ್ನು ಸಂಪರ್ಕಿಸುವ ಸಿಲ್ಚರ್–ಕಲೈನ್ ರಸ್ತೆಯಲ್ಲಿರುವ ದಶಕಗಳ ಹಳೆಯ ಈ ಸೇತುವೆ ಸುಮಾರು ಎರಡು ವರ್ಷಗಳ ನವೀಕರಣ ಕೆಲಸಗಳ ಬಳಿಕ ಕಳೆದ ತಿಂಗಳಷ್ಟೇ ಸಂಚಾರಕ್ಕೆ ಮುಕ್ತವಾಗಿತ್ತು.

ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೃದುಲ್ ಯಾದವ್ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಸಂಚಾರ ನಿರ್ಬಂಧಗಳಿದ್ದವು, ಓವರ್‌ಲೋಡ್ ವಾಹನಗಳ ತಪಾಸಣೆಗೆ ನಾಲ್ಕು ಚೆಕ್‌ಪಾಯಿಂಟ್‌ಗಳನ್ನು ನಿರ್ಮಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಎರಡು ಟ್ರಕ್‌ಗಳ ಚಾಲಕರಿಗೆ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಲೋಪ ಏನಾಗಿದೆ ಎಂಬುದರ ಬಗ್ಗೆ ತನಿಖೆ ನಡೆಲಾಗುವುದು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನುಮಾಲ್ ಮಹಟ್ಟಾ ಹೇಳಿದ್ದಾರೆ.

‘ಸೇತುವೆ ಕುಸಿದಿದ್ದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನದಿ ದಾಟಲು ಅಲ್ಲಿ ದೋಣಿಗಳನ್ನು ನಿಯೋಜಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಸೇತುವೆ ನವೀಕರಣದ ವೇಳೆ ಕಳಪೆ ಮಟ್ಟದ ವಸ್ತುಗಳನ್ನು ಉಪಯೋಗಿಸಿದ್ದೇ ಅವಘಢಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಆದರೆ ಸ್ಥಳೀಯರ ಈ ಆರೋ‍ಪವನ್ನು ಜಿಲ್ಲಾ ಪರಿಷತ್ ಸದಸ್ಯ ಫರಿದಾ ಪರ್ವೀನ್ ಲಷ್ಕರ್ ತಳ್ಳಿ ಹಾಕಿದ್ದು, ‌ಸೇತುವೆ ಭಾರ ಹೊರುವ ಸಾಮರ್ಥ್ಯ 40 ಟನ್. ಆದರೆ ಈ ಲಾರಿಗಳು ಸುಮಾರು 120–130 ಟನ್ ಭಾರ ಹೊತ್ತಿದ್ದವು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.