ADVERTISEMENT

ಅಸ್ಸಾಂ ಪ್ರವಾಹ: ಮತ್ತೆ 12 ಮಂದಿ ಸಾವು, ಮೃತಪಟ್ಟವರ ಸಂಖ್ಯೆ 101ಕ್ಕೆ ಏರಿಕೆ

ಪಿಟಿಐ
Published 23 ಜೂನ್ 2022, 13:29 IST
Last Updated 23 ಜೂನ್ 2022, 13:29 IST
ಪ್ರವಾಹದಿಂದ ಜಲವೃತವಾಗಿರುವ ಅಸ್ಸಾಂನ ಸಿಲಚಾರ್‌ ನಗರ
ಪ್ರವಾಹದಿಂದ ಜಲವೃತವಾಗಿರುವ ಅಸ್ಸಾಂನ ಸಿಲಚಾರ್‌ ನಗರ   

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ಭೀಕರವಾಗಿದ್ದು, ಗುರುವಾರ ಮತ್ತೆ 12 ಮಂದಿ ಮೃತಪಟ್ಟಿದ್ದಾರೆ. 54.4 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೇ ತಿಂಗಳ ಮಧ್ಯ ಭಾಗದಿಂದ ಇಲ್ಲಿಯವರೆಗೆ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 101ಕ್ಕೆ ಏರಿದೆ. ಬ್ರಹ್ಮಪುತ್ರ ಹಾಗೂ ಬಾರಕ್‌ ನದಿ ಮತ್ತು ಅವುಗಳ ಉಪನದಿಗಳ ಪಾತ್ರದ 32 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ರಕ್ಷಣಾ ಪಡೆಯ (ಎಸ್‌ಡಿಆರ್‌ಎಫ್‌) ಸಹಾಯದಿಂದ ಪ್ರವಾಹದಲ್ಲಿ ಸಿಲುಕಿದ್ದ 3,658 ಮಂದಿಯನ್ನು 276 ಹಡಗುಗಳ ಮೂಲಕ ರಕ್ಷಿಸಲಾಗಿದೆ’ ಎಂದು ಅವರು ಹೇಳಿದರು.

‘12 ಪ್ರವಾಹ ಪೀಡಿತ ಜಿಲ್ಲೆಗಳ 14,500 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎನ್‌ಡಿಆರ್‌ಎಫ್‌ನ ಮೊದಲನೇ ಬೆಟಾಲಿಯನ್‌ 12 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ರಕ್ಷಣಾ ಕಾರ್ಯಕ್ಕೆ 400 ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ 70 ಹಡಗುಗಳನ್ನು ನಿಯೋಜಿಸಲಾಗಿದೆ’ ಎಂದುಸಹಾಯಕ ಕಮಾಂಡೆಂಟ್ ಸಂತೋಷ್ ಕುಮಾರ್ ಸಿಂಗ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.