ADVERTISEMENT

ಅಸ್ಸಾಂ | ಗರ್ಗ್ ಸಾವಿನ ಪ್ರಕರಣ: ಸಂಗೀತಗಾರ ಶೇಖರ್, ಗಾಯಕಿ ಅಮೃತಪ್ರಭಾ ಬಂಧನ

ಪಿಟಿಐ
Published 3 ಅಕ್ಟೋಬರ್ 2025, 3:02 IST
Last Updated 3 ಅಕ್ಟೋಬರ್ 2025, 3:02 IST
<div class="paragraphs"><p>ಗಾಯಕಿ ಅಮೃತಪ್ರಭಾ ಮಹಾಂತ</p></div>

ಗಾಯಕಿ ಅಮೃತಪ್ರಭಾ ಮಹಾಂತ

   

ಗುವಾಹಟಿ: ಜುಬಿನ್ ಗರ್ಗ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೀತಗಾರ ಶೇಖರ್ ಜ್ಯೋತಿ ಗೋಸ್ವಾಮಿ ಮತ್ತು ಗಾಯಕಿ ಅಮೃತಪ್ರಭಾ ಮಹಾಂತ ಅವರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ವಿಚಾರಣೆಯ ನಂತರ ಗೋಸ್ವಾಮಿ ಮತ್ತು ಮಹಾಂತ ಅವರನ್ನು ಸಂಜೆ ಬಂಧಿಸಿ, ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಸ್ಸಾಂ ಸಿಐಡಿ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾ ತಿಳಿಸಿದ್ದಾರೆ.

ADVERTISEMENT

ಸಿದ್ಧಾರ್ಥ್‌, ಮಹಾಂತ ವಿರುದ್ಧ ಕೊಲೆ ಪ್ರಕರಣ: ಈ ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿರುವ ಗರ್ಗ್‌ ಅವರ ವ್ಯವಸ್ಥಾಪಕ ಸಿದ್ಧಾರ್ಥ್‌ ಶರ್ಮಾ ಮತ್ತು ಕಾರ್ಯಕ್ರಮದ ಆಯೋಜಕ ಶ್ಯಾಮಕಾನು ಮಹಾಂತ ವಿರುದ್ಧ ಅಸ್ಸಾಂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಇಬ್ಬರನ್ನೂ ದೆಹಲಿಯಲ್ಲಿ ಬುಧವಾರ ಬಂಧಿಸಲಾಗಿತ್ತು. ಸ್ಥಳೀಯ ನ್ಯಾಯಾಲಯವು ಆರೋಪಿಗಳನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಎಫ್‌ಐಆರ್‌ನಲ್ಲಿ ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 103 (ಕೊಲೆ) ಸೇರಿಸಿದ್ದೇವೆ. ಸದ್ಯ, ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಮುನ್ನಾ ಪ್ರಸಾದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.