ADVERTISEMENT

ಅಸ್ಸಾಂನ ಗೋಲ್ಪಾರದಲ್ಲಿ ಖಾಸಗಿ ಮದರಸಾ ಧ್ವಂಸಗೊಳಿಸಿದ ಗ್ರಾಮಸ್ಥರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2022, 10:17 IST
Last Updated 6 ಸೆಪ್ಟೆಂಬರ್ 2022, 10:17 IST
   

ಗುವಾಹಟಿ: ಅಸ್ಸಾಂನ ಗೋಪಾಲಪುರ ಜಿಲ್ಲೆಯ ದರೋಗರ್ ಅಲ್ಗಾ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಖಾಸಗಿ ಮದರಸವೊಂದನ್ನು ಗ್ರಾಮಸ್ಥರು ಧ್ವಂಸಗೊಳಿಸಿದ್ದಾರೆ.

ಅಸ್ಸಾಂ ಪೊಲೀಸರಿಗೆ ಬೇಕಾಗಿದ್ದ ಬಾಂಗ್ಲಾದೇಶ ಮೂಲದ ಅಮೀನುಲ್ ಇಸ್ಲಾಮ್ ಅಲಿಯಾಸ್ ಉಸ್ಮಾನ್ ಮತ್ತು ಜಹಾಂಗೀರ್ ಆಲೊಮ್ ಎನ್ನುವ ಇಬ್ಬರು ಈ ಮದರಸಾದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪರಾರಿಯಾಗಿದ್ದು, ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ ಕೈದಾ ಉಗ್ರಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ನಿಷೇಧಿತ ಉಗ್ರಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ಟೀಮ್‌ನ ಸದಸ್ಯರಾಗಿದ್ದ ಇಬ್ಬರು ಬಾಂಗ್ಲಾದೇಶಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ADVERTISEMENT

ಕಳೆದ ಆಗಸ್ಟ್‌ನಲ್ಲಿ ಮೋರಿಗಾನ್, ಬರ್ಪೆಟಾ ಮತ್ತು ಬೊಂಗೈಗಾನ್‌ ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ ಮದರಸಾಗಳನ್ನು ಅಲ್ಲಿನ ಆಡಳಿತವೇ ನೆಲಸಮ ಮಾಡಿತ್ತು. ನಿಯಮ ಉಲ್ಲಂಘಿಸಿ ಖಾಸಗಿ ಮದರಸಾ ನಿರ್ಮಿಸಲಾಗಿದೆ ಎಂದು ಪೊಲೀಸರು ಮತ್ತು ಸ್ಥಳೀಯಾಡಳಿತ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.