ADVERTISEMENT

ಮದುವೆಗೆ ಹೋಗಲು ವಿಧಾನಸಭೆಗೆ ಚಕ್ಕರ್: ಈ ಋತುವಿನಲ್ಲಿ ಕಲಾಪವೇ ಬೇಡ ಎಂದ ಸಚಿವ..!

ಪಿಟಿಐ
Published 5 ಡಿಸೆಂಬರ್ 2025, 11:14 IST
Last Updated 5 ಡಿಸೆಂಬರ್ 2025, 11:14 IST
   

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆಗೆ ಆಡಳಿತ ಹಾಗೂ ವಿರೋಧ ಪಕ್ಷದ ಬಹುತೇಕ ಶಾಸಕರು ಶುಕ್ರವಾರ ಗೈರುಹಾಜರಾಗಿದ್ದಾರೆ.

ಕಲಾಪದ ಪ್ರಶ್ನೋತ್ತರಕ್ಕಾಗಿ ಶಾಸಕರ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿತ್ತು. ಈ ವೇಳೆ, ವಿಧಾನಸಭಾ ಸ್ಪೀಕರ್‌ ನರೇಂದ್ರ ಸಿಂಗ್‌ ತೋಮರ್‌ ಅವರು ಶಾಸಕರ ಹೆಸರನ್ನು ಕರೆದಾಗ, ಹಲವರು ಉತ್ತರಿಸಿಲ್ಲ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕಾಂಗ ವ್ಯವಹಾರ ಸಚಿವ ಕೈಲಾಸ್‌ ವಿಜಯವರ್ಗೀಯ ಅವರು ‘ತಮ್ಮ ಮದುವೆ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಬೇಕು ಎಂದು ಜನರು ಬಯಸುತ್ತಾರೆ. ಮದುವೆ ಸೀಸನ್‌ ಇರುವುದರಿಂದ, ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿನ ಮದುವೆಗಳಲ್ಲಿ ಭಾಗಿಯಾಗಿದ್ದಾರೆ. ಅದರಿಂದ ಕಲಾಪಕ್ಕೆ ಗೈರುಹಾಜರಾಗಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಮುಂದಿನ ಬಾರಿಯಿಂದ ಮದುವೆ ಸೀಸನ್‌ ಗಮನದಲ್ಲಿಟ್ಟುಕೊಂಡು, ಕಲಾಪಗಳ ಸಮಯವನ್ನು ನಿಗದಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಶಾಸಕರಾದ ಕಮಲೇಶ್ವರ್, ಕುನ್ವರ್‌ ಸಿಂಗ್, ರಾಜೇಂದ್ರ ಬಾರ್ತಿ, ನರೇಂದ್ರ ಸಿಂಗ್, ದೀರೇಂದ್ರ ಸಿಂಗ್, ಸತೀಶ್ ಮಾಳ್ವಿಯಾ, ರಾಜೇಶ್‌ ಕುಮಾರ್ ಶುಕ್ಲಾ, ಮುಕೇಶ್ ಮಲ್ಹೋತ್ರಾ, ವಿರೇಂದ್ರ ಸಿಂಗ್ ಹಾಗೂ ಭೂಪೇಂದ್ರ ಸಿಂಗ್‌ ಸೇರಿದಂತೆ ಹಲವು ಶಾಸಕರು ಗೈರುಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.