ADVERTISEMENT

ನಾನು ಭಯೋತ್ಪಾದಕನಲ್ಲವೆಂದು ದೇಶದ ಜನ ಸ್ಪಷ್ಟಪಡಿಸಿದ್ದಾರೆ: ಕೇಜ್ರಿವಾಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 13:25 IST
Last Updated 10 ಮಾರ್ಚ್ 2022, 13:25 IST
ಭಗವಂತ ಮಾನ್‌– ಅರವಿಂದ್‌ ಕೇಜ್ರಿವಾಲ್‌
ಭಗವಂತ ಮಾನ್‌– ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ದೆಹಲಿಯ ನಂತರ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಈ ಅಭೂತಪೂರ್ವ ಗೆಲುವಿನ ಕುರಿತು ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಪ್ರತಿಕ್ರಿಯಿಸಿದರು.

‘ಕೇಜ್ರಿವಾಲ್ ಭಯೋತ್ಪಾದಕನಲ್ಲ. ಆತ ದೇಶದ ಮಗ, ನಿಜವಾದ ದೇಶಭಕ್ತ ಎಂಬುದಾಗಿ ಜನರು ಸ್ಪಷ್ಟಪಡಿಸಿದ್ದಾರೆ’ ಎಂದು ಅವರು ಹೇಳಿದರು.

‘ಇದು ಬದಲಾವಣೆಯ ಸಮಯ. ಇದೊಂದು ಇಂಕ್ವಿಲಾಬ್ (ಕ್ರಾಂತಿ). ಎಎಪಿಗೆ ಸೇರಲು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಎಎಪಿ ಕೇವಲ ಒಂದು ಪಕ್ಷವಲ್ಲ. ಇದು ಕ್ರಾಂತಿಯ ಹೆಸರು’ ಎಂದು ಕೇಜ್ರಿವಾಲ್‌ ಹೇಳಿದರು.

ADVERTISEMENT

‘ಮೊದಲು ದೆಹಲಿಯಲ್ಲಿ ಕ್ರಾಂತಿಯಾಯಿತು, ನಂತರ ಪಂಜಾಬ್‌ನಲ್ಲಿ ಕ್ರಾಂತಿ ಆಗಿದೆ. ಈಗ ಇದು ದೇಶಕ್ಕೆ ವ್ಯಾಪಿಸಲಿದೆ’ ಎಂದು ಅವರು ತಿಳಿಸಿದರು.

ಪಂಜಾಬ್‌ನ ಜನರು ಅದ್ಭುತವನ್ನು ಸೃಷ್ಟಿಸಿದ್ದಾರೆ ಎಂದು ಕೇಜ್ರಿವಾಲ್‌ ಹೇಳಿದರು.

‘ಕೇಜ್ರಿವಾಲ್ ಭಯೋತ್ಪಾದಕ ಎಂದು ಎಲ್ಲರೂ ಹೇಳಿದರು. ಈ ಫಲಿತಾಂಶಗಳ ಮೂಲಕ ದೇಶದ ಜನರು ಮಾತನಾಡಿದ್ದಾರೆ. ದೇಶವನ್ನು ಲೂಟಿ ಮಾಡುವವರಿಗೆ ಕೇಜ್ರಿವಾಲ್‌ ಭಯೋತ್ಪಾದಕ ಎಂಬುದಾಗಿ ಜನರು ಹೇಳಿದ್ದಾರೆ’ ಎಂದು ದೆಹಲಿ ಸಿಎಂ ತಿಳಿಸಿದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.