ನವದೆಹಲಿ: ದೆಹಲಿಯ ವಸಂತ್ ವಿಹಾರ್ ಪ್ರದೇಶದ ಶಿವ ಕ್ಯಾಂಪ್ ಬಳಿ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಕುಡಿದ ಮತ್ತಿನಲ್ಲಿ ಔಡಿ ಕಾರು ಹರಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಎಂಟು ವರ್ಷದ ಬಾಲಕಿ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಜುಲೈ 9 ರಂದು ನಸುಕಿನಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ದ್ವಾರಕಾ ನಿವಾಸಿ ಉತ್ಸವ್ ಶೇಖರ್ (40) ಎಂದು ಗುರುತಿಸಲಾಗಿದೆ.
ಈ ಘಟನೆಯಲ್ಲಿ ಲಾಧಿ (40), ಅವರ ಎಂಟು ವರ್ಷದ ಮಗಳು ಬಿಮ್ಲಾ, ಪತಿ ಸಬಾಮಿ ಅಲಿಯಾಸ್ ಚಿರ್ಮಾ (45), ರಾಮ್ ಚಂದರ್ (45) ಮತ್ತು ಅವರ ಪತ್ನಿ ನಾರಾಯಣಿ (35) ಗಾಯಗೊಂಡವರು ಎಂದು ಗುರುತಿಸಲಾಗಿದ್ದು, ಎಲ್ಲರೂ ರಾಜಸ್ಥಾನ ನಿವಾಸಿಗಳಾಗಿದ್ದಾರೆ.
ಶಿವಾ ಕ್ಯಾಂಪ್‌ನ ಫುಟ್‌ಪಾತ್‌ನಲ್ಲಿ ಐವರು ಮಲಗಿದ್ದ ವೇಳೆ ಬಿಳಿ ಔಡಿ ಕಾರು ಏಕಾಏಕಿ ಹರಿಸಿದ್ದರ ಪರಿಣಾಮ ಬಾಲಕಿ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯು ಕುಡಿದ ಮತ್ತಿನಲ್ಲಿ ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.