ಸಾಂದರ್ಭಿಕ ಚಿತ್ರ
ಐಸ್ಟಾಕ್ ಚಿತ್ರ
ಉದಯಪುರ: ‘ಮೊಘಲ್ ದೊರೆ ಔರಂಗಜೇಬ್ ಒಬ್ಬ ಸಮರ್ಥ ಆಡಳಿತಗಾರ’ ಎಂದು ಹೊಗಳಿದ ಮೋಹನಲಾಲ್ ಸುಖಾಡಿಯಾ ವಿಶ್ವವಿದ್ಯಾಲಯದ ಕುಲಪತಿ ಸುನಿತಾ ಮಿಶ್ರಾ ಅವರ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ, ಬಹಿರಂಗವಾಗಿ ಅವರು ಕ್ಷಮೆ ಯಾಚಿಸಿದ್ದಾರೆ.
ಕುಲಪತಿ ಮಿಶ್ರಾ ಅವರ ಹೇಳಿಕೆಗೆ ಮೇವಾಡ ಪ್ರಾಂತ್ಯದಲ್ಲಿ ವ್ಯಾಪಕ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ವಿವಿಧ ಸಮುದಾಯಗಳು ಕುಲಪತಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ABVP) ಸದಸ್ಯರು ಉದಯಪುರದಲ್ಲಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿ, ಕ್ಷಮೆಗೆ ಪಟ್ಟು ಹಿಡಿದಿದ್ದರು.
ವ್ಯಾಪಕ ಪ್ರತಿಭಟನೆಗೆ ಮಣಿದ ಕುಲಪತಿ ಸುನಿತಾ ಮಿಶ್ರಾ, ವಿಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ. ‘ತಪ್ಪಾಗಿ ಆ ಹೇಳಿಕೆ ನೀಡಿದ್ದೇನೆ. ಇದಕ್ಕಾಗಿ ನೊಂದ ಸಮುದಾಯದ ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.
‘ಇದೇ ತಿಂಗಳ 12ರಂದು ನಾನು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ‘ವಿಕಸಿತ ಭಾರತ 2047’ ಎಂಬ ಕಾರ್ಯಕ್ರಮದಲ್ಲಿ ತಪ್ಪಾಗಿ ಹೇಳಿಕೆಯೊಂದನ್ನು ನೀಡಿದ್ದೆ. ಅದಕ್ಕಾಗಿ ನಾನು ರಾಷ್ಟ್ರೀಯ ರಜಪುತ್ ಕರ್ಣಿ ಸೇನಾ ಹಾಗೂ ಮೇವಾಡದ ಜನರ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.
‘ನನ್ನ ಹೇಳಿಕೆಯ ಪರಿಣಾಮ ಯಾವುದೇ ಉದ್ದೇಶವಿಲ್ಲದೆ ಹಲವರ ಮನಸ್ಸಿಗೆ ನೋವಾಗಿದೆ. ಅದಕ್ಕಾಗಿ ನಾನು ರಜಪೂತ್ ಸಮುದಾಯದ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.