ADVERTISEMENT

ಕೋವಿಡ್ ಭೀತಿ: ಅನಿರ್ದಿಷ್ಟಾವಧಿಗೆ ಗಡಿ ಬಂದ್ ಮಾಡಿದ ಆಸ್ಟ್ರೇಲಿಯಾ

ಪಿಟಿಐ
Published 9 ಮೇ 2021, 10:43 IST
Last Updated 9 ಮೇ 2021, 10:43 IST
ಸ್ಕಾಟ್‌ ಮಾರಿಸನ್
ಸ್ಕಾಟ್‌ ಮಾರಿಸನ್   

ಮೆಲ್ಬರ್ನ್: ಕೋವಿಡ್‌ ಸೋಂಕಿನಿಂದ ದೇಶದ ಪ್ರಜೆಗಳನ್ನು ರಕ್ಷಿಸುವ ದೃಷ್ಟಿಯಿಂದ ಜಗತ್ತಿನ ಜೊತೆಗೆ ಸಂಪರ್ಕ ಕಲ್ಪಿಸುವ ಎಲ್ಲ ಗಡಿಯನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗುವುದು ಎಂದು ಆಸ್ಟ್ರೇಲಿಯಾ ಭಾನುವಾರ ಪ್ರಕಟಿಸಿದೆ.

ಪ್ರಧಾನಿ ಸ್ಕಾಟ್ ಮಾರಿಸನ್‌ ಈ ತೀರ್ಮಾನವನ್ನು ಪ್ರಕಟಿಸಿದರು. ಸೋಂಕು ಸ್ಥಿತಿ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಿಂದಲೂ ಗಡಿ ಬಂದ್‌ ಆಗಿದೆ. ಕಟ್ಟುನಿಟ್ಟಿನ ನಿಯಮಗಳ ಪಾಲನೆಯೊಂದಿಗೆ ದೇಶದ ಪ್ರಜೆಗಳಿಗಷ್ಟೇ ದೇಶಕ್ಕೆ ಮರಳಲು ಅವಕಾಶವಿದೆ.

ಆಸ್ಟ್ರೇಲಿಯಾ ಭಾರತದಿಂದ ಬರವು ಎಲ್ಲ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಈಗಾಗಲೇ ರದ್ದುಪಡಿಸಿದೆ. ಭಾರತದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳ ತೀವ್ರ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಬಂಧವು ಮೇ 15ರವರೆಗೂ ಜಾರಿಯಲ್ಲಿರಲಿದೆ.

ADVERTISEMENT

ಜಗತ್ತಿನೊಂದಿಗೆ ಸಂಪರ್ಕ ಹೊಂದಬೇಕು ಎಂಬ ಹಸಿವು ಆಸ್ಟ್ರೇಲಿಯನ್ನರಲ್ಲಿ ಸದ್ಯ ಇದೆ ಎಂದು ನಾನು ಭಾವಿಸಿಲ್ಲ. ಒಟ್ಟು ಪರಿಸ್ಥಿತಿಯನ್ನು ನಾವು ಜಾಗರೂಕತೆಯಿಂದ ಗಮನಿಸುತ್ತಿದ್ದೇವೆ ಎಂದು ಮಾರಿಸನ್ ತಿಳಿಸಿದರು.

ನಾಗರಿಕರಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡಿದ ನಂತರವೂ ಜಗತ್ತಿನ ಜೊತೆಗೆ ಮರುಸಂಪರ್ಕ ಹೊಂದುವುದು ಸುರಕ್ಷಿತವೇ ಎಂಬ ಬಗ್ಗೆಯೂ ನಮಗೆ ಅಸ್ಪಷ್ಟತೆಯಿದೆ. ಇದೇ ಕಾರಣದಿಂದ ಅನಿರ್ದಿಷ್ಟಾವಧಿಗೆ ಗಡಿಬಂದ್ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.