
ಲೋಕಸಭೆ
ನವದೆಹಲಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ ಕಳೆದ ಐದು ವರ್ಷಗಳಲ್ಲಿ, ಪ್ರತಿ ಕಾರ್ಮಿಕರ ಕುಟುಂಬಕ್ಕೆ ಸರಾಸರಿ 50 ದಿನಗಳ ಉದ್ಯೋಗ ಒದಗಿಸಲಾಗಿದೆ' ಎಂದು ಗ್ರಾಮೀಣ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಅವರು ರಾಜ್ಯಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
'ಈ ಯೋಜನೆಯು, ವಾರ್ಷಿಕ ನೂರು ದಿನಗಳವರೆಗೆ ಸ್ವ ಪ್ರೇರಣೆಯಿಂದ ಕೆಲಸ ಮಾಡಲು ಇಚ್ಛಿಸುವ ಪ್ರತಿ ಕುಟುಂಬದ ವಯಸ್ಕ ಕಾರ್ಮಿಕರಿಗೆ, ದೈಹಿಕ ದಂಡನೆ ಬಯಸುವ ಕೌಶಲ್ಯರಹಿತ ಉದ್ಯೋಗವನ್ನು ಒದಗಿಸುತ್ತದೆ' ಎಂದರು.
2020–21ರಲ್ಲಿ ಸರಾಸರಿ 51.24 ದಿನಗಳು, 2021–22ರಲ್ಲಿ 50.07, 2022–23ರಲ್ಲಿ 47.84, 2023–24ರಲ್ಲಿ 52.07 ಹಾಗೂ ಪ್ರಸ್ತುತ 2024–25ರ ಆರ್ಥಿಕ ವರ್ಷದಲ್ಲಿ ಈವರೆಗೆ ಸರಾಸರಿ 50.24 ದಿನಗಳನ್ನು ಒಳಗೊಂಡು ಕಳೆದ ಐದು ಆರ್ಥಿಕ ವರ್ಷಗಳಲ್ಲಿ, ಸರಾಸರಿ 50.35 ದಿನಗಳ ಉದ್ಯೋಗ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.