ADVERTISEMENT

ಡ್ರೋನ್‌ ಮೂಲಕ ಲಸಿಕೆ ಸಾಗಾಟ: ತೆಲಂಗಾಣ ಸರ್ಕಾರಕ್ಕೆ ಅನುಮತಿ

ಪಿಟಿಐ
Published 30 ಏಪ್ರಿಲ್ 2021, 8:31 IST
Last Updated 30 ಏಪ್ರಿಲ್ 2021, 8:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೆಲವು ನಿಬಂಧನೆಗಳಿಗೆ ಒಳಪಟ್ಟು, ಡ್ರೋನ್‌ಗಳ ಮೂಲಕ ಲಸಿಕೆಯನ್ನು ನಿರ್ದಿಷ್ಟ ಸ್ಥಳಕ್ಕೆ ಪ್ರಾಯೋಗಿಕವಾಗಿ ತಲುಪಿಸಲು ತೆಲಂಗಾಣ ಸರ್ಕಾರಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ.

‘ಅನ್‌ಮ್ಯಾನ್ಡ್‌ ಏರ್‌ಕ್ರಾಫ್ಟ್‌ ಸಿಸ್ಟಂ ನಿಯಮಗಳಿಂದ ತೆಲಂಗಾಣ ಸರ್ಕಾರಕ್ಕೆ ನಿರ್ಬಂಧಿತ ವಿನಾಯಿತಿ ನೀಡಲಾಗಿದೆ. ಕಣ್ಣಿಗೆ ಗೋಚರಿಸುವಷ್ಟು ವ್ಯಾಪ್ತಿಯೊಳಗೆ ಡ್ರೋನ್‌ ಬಳಸಿ ಲಸಿಕೆಯನ್ನು ಸಾಗಾಟ ಮಾಡಲು ಅನುಮತಿ ನೀಡಲಾಗಿದೆ’ ಎಂದು ಸಚಿವಾಲಯ ಟ್ವೀಟ್‌ನಲ್ಲಿ ಹೇಳಿದೆ.

ಒಂದು ವರ್ಷದ ಅವಧಿಗೆಈ ವಿನಾಯಿತಿ ನೀಡಲಾಗಿದೆ ಎಂದು ಹೇಳಿರುವ ಸಚಿವಾಲಯ, ಈ ಪ್ರಾಯೋಗಿಕ ಸಾಗಾಟಕ್ಕೆ ಯಾವ ಲಸಿಕೆಯನ್ನು ಬಳಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.